ಕರ್ನಾಟಕ

5 ಲಕ್ಷ ಕಪ್ಪುಹಣ ಠೇವಣಿ ಮಾಡಿದರೆ ಉಳಿಯುವುದು 36,500 ರೂ.!

Pinterest LinkedIn Tumblr

noteಬೆಂಗಳೂರು(ನ. 21): ನೋಟ್ ನಿಷೇಧದ ನಂತರ ಕೇಂದ್ರ ಸರ್ಕಾರ ಕಾಳಧನಿಕರಿಗೆ ಮತ್ತೊಂದು ಶಾಕ್ ನೀಡಿದೆ. 2.5 ಲಕ್ಷಕ್ಕೂ ಅಧಿಕ ಹಣವನ್ನ ಯಾರೇ ತಮ್ಮ ಖಾತೆಗೆ ಜಮಾ ಮಾಡಿದ್ರೂ ಸೂಕ್ತ ದಾಖಲೆ ನೀಡಬೇಕು. ಒಂದು ವೇಳೆ ಆ ದಾಖಲೆಗಳಲ್ಲಿ ಲೋಪವಿದ್ದಲ್ಲಿ ಠೇವಣಿ ಹಣಕ್ಕೆ ಇನ್ಮುಂದೆ ತೆರಿಗೆ ಜೊತೆ ದಂಡವೂ ಬೀಳಲಿದೆ.
ನೋಟ್ ಬ್ಯಾನ್’ಗೂ ಮೊದಲೇ ಕೇಂದ್ರ ಸರ್ಕಾರ ಕಾಳಧನಿಕರಿಗೆ ಕಪ್ಪು ಹಣವನ್ನೂ ಕೂಡ ಅಕೌಂಟ್’ಗೆ ಜಮೆ ಮಾಡಿ, ಸರಿಯಾದ ತೆರಿಗೆ ಕಟ್ಟಲು ಅವಕಾಶವನ್ನ ನೀಡಿತ್ತು. ಆದ್ರೆ ಇದನ್ನ ಕಪ್ಪುಕುಳಗಳು ಗಣನೆಗೆ ತೆಗೆದುಕೊಂಡಿರಲಿಲ್ಲ. ಆದ್ರೆ ಅದರ ಪರಿಣಾಮವನ್ನ ಈಗ ಅನುಭವಿಸುವಂತಾಗಿದೆ.
ಕಪ್ಪುಹಣ ಠೇವಣಿ ಮಾಡಿದರೆ ಉಳಿಯುವುದೆಷ್ಟು?
5 ಲಕ್ಷ ಠೇವಣಿ:
ಶೇ.30 – ಆದಾಯ ತೆರಿಗೆ – 1.5 ಲಕ್ಷ
ಶೇ.3 – ಶಿಕ್ಷಣ ಸೆಸ್ – 4,500 ರೂ.
ಶೇ. 200 ದಂಡ – 3.09 ಲಕ್ಷ ರೂ.
ಒಟ್ಟು ತೆರಿಗೆ – 4,63,500 ರೂ.
ಉಳಿಯುವುದು – 36,500 ರೂ.
10 ಲಕ್ಷ ಠೇವಣಿ:
ಶೇ.30 – ಆದಾಯ ತೆರಿಗೆ – 3, 00, 000
ಶೇ.3 – ಶಿಕ್ಷಣ ಸೆಸ್ – 9000 ರೂ.
ಶೇ. 200 ದಂಡ – 6, 18,000 ರೂ.
ಒಟ್ಟು ತೆರಿಗೆ – 9,27,000 ರೂ.
ಉಳಿಯುವುದು – 73,500 ರೂ.
15 ಲಕ್ಷ ಠೇವಣಿ:
ಶೇ.30 – ಆದಾಯ ತೆರಿಗೆ -4,50, 000
ಶೇ.3 – ಶಿಕ್ಷಣ ಸೆಸ್ – 13, 500 ರೂ.
ಶೇ. 200 ದಂಡ – 9, 27,000 ರೂ.
ಒಟ್ಟು ತೆರಿಗೆ – 13, 90,500 ರೂ.
ಉಳಿಯುವುದು – 1,09, 000 ರೂ.
ಲಕ್ಷಗಟ್ಟಲೇ ಠೇವಣಿ ಮಾಡಿದ್ರೆ ಉಳಿಯೋದು ಪುಡಿಗಾಸು. ಇನ್ನು, ಬಚ್ಚಿಟ್ಟ ಹಣವನ್ನ ಹಾಗೇ ಇಟ್ರೆ ಮೌಲ್ಯವಿಲ್ಲ.
ಬೇನಾಮಿ ಲೆಕ್ಕ ಕೊಟ್ಟರೆ 7 ವರ್ಷ ಜೈಲು?
ದಂಡದಿಂದ ತಪ್ಪಿಸಿಕೊಳ್ಳಲು ಕೆಲವರು ಬೇನಾಮಿ ಅಕೌಂಟ್ ಸೃಷ್ಟಿ ಮಾಡಿರುವ ಪ್ರಮೇಯಗಳು ಇವೆ, ಅದೂ ಸಾಲದು ಎಂಬಂತೆ ಮತ್ತೊಬ್ಬರ ಅಕೌಂಟ್’ನಲ್ಲಿ ಜಮೆ ಮಾಡಿ, ಅವರಿಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ನೀಡುವ ವ್ಯವಹಾರಗಳು ನಡೆಯುತ್ತಿವೆ. ಇಂಥವರೇನಾದ್ರೂ ಸಿಕ್ಕಿಬಿದ್ರೆ ದಂಡದ ಜೊತೆ 7 ವರ್ಷಗಳ ಕಾರಾಗೃಹ ಶಿಕ್ಷೆ ಕೂಡ ಅನುಭವಿಸಬೇಕಾಗುತ್ತೆ.
ಹೀಗೆ ಕಪ್ಪುಕುಳಗಳ ಎಲಾ ರೀತಿಯ ವಾಮಮಾರ್ಗವನ್ನೂ ಬಂದ್ ಮಾಡುವ ಕೆಲಸ ನಡೆಯುತ್ತಿದೆ. ಈ ಮಧ್ಯೆ ಇಂದಿನಿಂದ ಮತ್ತೆ ಎಲ್ಲಾ ಬ್ಯಾಂಕ್’ಗಳಲ್ಲಿ ವ್ಯವಹಾರಗಳು ಪುನಾರಂಭವಾಗುತ್ತಿವೆ. ದೇಶಾದ್ಯಂತ ನೋಟು ವಿನಿಮಯ ನಡೆಯಲಿದೆ.

Comments are closed.