ಕರ್ನಾಟಕ

ಎಟಿಎಂನಲ್ಲಿ 100 ರೂ.ನ ಸುಟ್ಟ ನೋಟುಗಳು

Pinterest LinkedIn Tumblr

atmಚಿಕ್ಕಬಳ್ಳಾಪುರ, ನ. ೧೯ – ಕೇಂದ್ರ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿದ ನಂತರ 100 ರೂ.ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಈ ನಡುವೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ವಿಜಯಾಬ್ಯಾಂಕ್ ಎಟಿಎಂನಲ್ಲಿ ಕ್ಯೂ ನಿಂತು ಹಣ ಡ್ರಾ ಮಾಡುವ ಗ್ರಾಹಕರಿಗೆ ಶಾಕ್ ಕಾದಿತ್ತು.
ಇಲ್ಲಿನ ಎಟಿಎಂನಲ್ಲಿ ಡ್ರಾ ಆದ 100 ಮುಖಬೆಲೆಯ ನೋಟುಗಳೆಲ್ಲಾ ಸುಟ್ಟ ರೀತಿಯಲ್ಲಿ ಪತ್ತೆಯಾಗಿವೆ. ಅಂದಹಾಗೆ ಆರ್‌ಬಿಐ ರಿಜೆಕ್ಟ್ ಮಾಡಿರುವ ಸುಟ್ಟ ನೋಟುಗಳನ್ನು ಎಟಿಎಂಗೆ ಹಾಕಿ ಗ್ರಾಹಕರಿಗೆ ವಿಜಯಾ ಬ್ಯಾಂಕ್ ಮೋಸ ಮಾಡುತ್ತಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ರಾತ್ರಿ ನೂರಾರು ಸಂಖ್ಯೆಯಲ್ಲಿ ಎಟಿಎಂನಲ್ಲಿ ಡ್ರಾ ಮಾಡಿದ ಗ್ರಾಹಕರಿಗೆಲ್ಲಾ ಸುಟ್ಟ ನೋಟುಗಳು ಬಂದಿವೆ. ಈ ಸುಟ್ಟ ನೋಟುಗಳನ್ನು ಹೇಗೆ ಚಲಾವಣೆ ಮಾಡೋದು ಅಂತಾ ಜನ ಕಂಗಾಲಾಗಿದ್ದಾರೆ.

Comments are closed.