ಕರ್ನಾಟಕ

ರೆಡ್ಡಿ ಮಗಳ ಮದುವೆ: ಹತ್ತಾರು ಎಕರೆ ಮನೆಗೆಲ್ಲಾ ಲೈಟಿಂಗ್ಸ್!

Pinterest LinkedIn Tumblr

reddyಬಳ್ಳಾರಿ: ಮಾಜಿ ಸಚಿವ, ಗಣಿ-ಧಣಿ ಜನಾರ್ದನರೆಡ್ಡಿ ಪುತ್ರಿಯ ವಿವಾಹಕ್ಕೆ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ. ನವಂಬರ್ 16 ರಂದು ನಡೆಯುವ ಮದುವೆಗೆ ರೆಡ್ಡಿಯ ಮನೆ ತುಂಬಾ ಇದೀಗ ಸಂಭ್ರಮ ತುಂಬಿದೆ.

ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಿ ಮಾಡುತ್ತಿರುವ ಮಗಳು ಬ್ರಹ್ಮಣಿ ಮದುವೆಗೆ ಇದೀಗ ರೆಡ್ಡಿ ಮನೆಯಲ್ಲಿ ಸಂಭ್ರಮವೇ ಮನೆ ಮಾಡಿದೆ. ನವಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮದುವೆಗೆ ರೆಡ್ಡಿ ಕುಟುಂಬ ಸೋಮವಾರ ದೇವರ ಪೂಜೆ ಸಲ್ಲಿಸೋ ಮೂಲಕ ಮದುವೆ ಸಿದ್ಧತೆಗಳನ್ನು ಭರ್ಜರಿಯಾಗಿ ನಡೆಸುತ್ತಿದೆ.

ಮಧ್ಯಾಹ್ನ ಮನೆ ದೇವರಾದ ಮೌನೇಶ್ವರ. ಗಣಪತಿ ಪೂಜೆ. ಗಣಹೋಮ ನಡೆಸುವ ಮೂಲಕ ರೆಡ್ಡಿ ಕುಟುಂಬದ ಸದಸ್ಯರು ಮದುವೆ ಕಾರ್ಯಗಳನ್ನು ಆರಂಭಿಸಿದರು. ಮದುಮಗಳಾದ ಬ್ರಹ್ಮಣಿ, ಜನಾರ್ದನ ರೆಡ್ಡಿ, ಪತ್ನಿ ಲಕ್ಷಿ ಅರುಣಾ ದೇವರ ಪೂಜೆ ಮಾಡಿದರು. Àುನೆಯ ಸದಸ್ಯರು ಹಾಗೂ ಸಂಸದ ಶ್ರೀರಾಮುಲು ಮಾತ್ರ ಮದುವೆ ಕಾರ್ಯಗಳಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸೋ ಮೂಲಕ ಲಗ್ನದ ಕಾರ್ಯಗಳಿಗೆ ಚಾಲನೆ ನೀಡಿದರು.

ಎಕೈಕ ಪುತ್ರಿ ಬ್ರಹ್ಮಣಿ ಮದುವೆಯನ್ನು ಮಾಜಿ ಸಚಿವರು ಅದ್ಧೂರಿಯಾಗಿ ನಡೆಸಲು ಮುಂದಾಗಿರುವುದು ಎಲ್ಲರಿಗೂ ತಿಳಿದಿದ್ದು, ಮಾಜಿ ಸಚಿವರು ತಮ್ಮ ಮನೆಗೆಲ್ಲಾ ಲೈಟಿಂಗ್ ಅಲಂಕಾರ ಮಾಡಿ ಶೃಂಗರಿಸಿದ್ದಾರೆ. ಅಹಂಭಾವಿ ಪ್ರದೇಶದಲ್ಲಿರುವ ಹತ್ತಾರು ಎಕರೆ ಮನೆಗೆಲ್ಲಾ ಲೈಟಿಂಗ್ ಅಳವಡಿಸಿದ್ದು ರೆಡ್ಡಿ ಮನೆಯೀಗ ವಿದ್ಯುತ್ ದ್ವೀಪಗಳಿಂದ ಜಗಮಗಿಸುತ್ತಿದೆ.

ಬಳ್ಳಾರಿ ಮನೆಯಲ್ಲಿ ಬಳೆ ತೊಡಿಸುವ ಕಾರ್ಯ, ಮದುಮಗಳನ್ನಾಗಿ ಮಾಡುವುದು. ಸೇರಿದಂತೆ ಮೆಹಂದಿ ಕಾರ್ಯಗಳು ನಡೆಯಲಿದ್ದು 10 ರ ನಂತರ ರೆಡ್ಡಿ ಕುಟುಂಬ ಬೆಂಗಳೂರಿನ ಮನೆಗೆ ತೆರಳಲಿದೆ.

Comments are closed.