ಕರ್ನಾಟಕ

ಮೆಜೆಸ್ಟಿಕ್‌ನಲ್ಲಿ ಮೆಟ್ರೋದ ಮುಖ್ಯ ನಿಲ್ದಾಣ

Pinterest LinkedIn Tumblr

metroಬೆಂಗಳೂರು, ನ. ೭- ಇನ್ನೇನು ಕೆಲವೇ ದಿನಗಳಲ್ಲಿ ಮೊದಲನೇ ಹಂತದ ಮೆಟ್ರೋನ ಎಲ್ಲಾ ಮಾರ್ಗಗಳ ಸಂಚಾರಕ್ಕೆ ಮುಕ್ತವಾಗಲಿದೆ. ಹೀಗಾಗಿ ನಮ್ಮ ಮೆಟ್ರೋದ ಮುಖ್ಯ ನಿಲ್ದಾಣವನ್ನು ಸಜ್ಜುಗೊಳಿಸುವ ಸಿದ್ಧತೆ ಭರದಿಂದ ಸಾಗುತ್ತಿದೆ.
ಮೆಟ್ರೋ ಈಗಾಗಲೇ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ದಿನದಿಂದ ದಿನಕ್ಕೆ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಶನಿವಾರದಿಂದ 4 ನಿಮಿಷಕ್ಕೊಂದು ಮೆಟ್ರೋ ಸಂಚಾರವೂ ಆರಂಭವಾಗಿವೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ನಮ್ಮ ಮೆಟ್ರೋದ ಮುಖ್ಯವಾದ ಸ್ಟೇಷನ್ ಆಗಿದೆ. ಪ್ರಯಾಣಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಮೆಜೆಸ್ಟಿಕ್ಗೆಮ ಬರಬೇಕಾಗುತ್ತದೆ. ಕಾರಣ ಮೆಜೆಸ್ಟಿಕ್ ಇಂಟರ್ ಚೇಂಜ್ ಸ್ಟೇಷನ್ ಆಗಿದೆ. ಹಾಗಾಗಿ ಈ ನಿಲ್ದಾಣವನ್ನು ಎಲ್ಲಾ ಆಯಾಮಗಳಿಂದಲೂ ಸುಂದರಗೊಳಿಸಲು ನಮ್ಮ ಮೆಟ್ರೋ ಸಿಬ್ಬಂದಿ ಮುಂದಾಗಿದ್ದಾರೆ.
ಮೆಟ್ರೋದ ಪ್ರಮುಖ ನಿಲ್ದಾಣವಾಗಿರುವ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ನಕ ವ್ಯಾಪ್ತಿ 2 ಎಕರೆ 20 ಗುಂಟೆ. ನಾಲ್ಕು ಸ್ಥಾವರದ ಸ್ಟೇಷನ್ ಇದಾಗಿದ್ದು, 70 ಅಡಿ ಆಳದಲ್ಲಿ ಸ್ಟೇಷನ್ ನಿರ್ಮಾಣಗೊಂಡಿದೆ. ಪ್ರಯಾಣಿಕರಿಗಾಗಿ 46 ಎಸ್ಕ್ಲೇಟರ್, 2 ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಟಿಕೆಟ್‌ಕ್ಕಾಗಿ 4 ದೊಡ್ಡ ಕೌಂಟರ್‌ಗಳು ಇರುತ್ತವೆ. ಏಕಕಾಲದಲ್ಲಿ 20 ಸಾವಿರ ಪ್ರಯಾಣಿಕರು ನಿಲ್ದಾಣದಲ್ಲಿ ಓಡಾಡಬಹುದು. ಸ್ಮೋಕ್ ಡಿಟೆಕ್ಟರ್, ಫೈರ್ ಎಕ್ಸಿಟ್ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯೂ ಅತ್ಯುತಮವಾಗಿದೆ.
ಈ ಸ್ಟೇಷನ್ ಮೇಲೆ ಇನ್ನೂ 6 ಫ್ಲೋರ್‌ಗಳನ್ನು ಕಟ್ಟಲು ಅನುಮತಿಯೂ ಸಿಕ್ಕಿದೆ. ಸ್ಟೇಷನ್ ಒಳಗೆ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಸ್ಥಳಾವಕಾಶ ಮಾಡಿಕೊಡಲಾಗಿದೆ. ಈ ಸ್ಟೇಷನ್ ನಿರ್ಮಾಣದಲ್ಲಿ 32 ಸಾವಿರ ಮೆಟ್ರಿಕ್ ಟನ್ ಸಿಮೆಂಟ್ ಮತ್ತು 21 ಸಾವಿರ ಮೆಟ್ರಿಕ್ ಟನ್ ಸ್ಟೀಲ್ನೇ ಬಳಕೆಯಾಗಿದೆ. ಬಿಎಂಟಿಸಿ, ಕೆಎಸ್ಆಡರ್ಟಿ್ಸಿ ಮತ್ತು ಸಿಟಿ ರೈಲು ನಿಲ್ದಾಣಕ್ಕೆ ಈ ಸ್ಟೇಷನ್ ನೇರ ಸಂಪರ್ಕವನ್ನು ಹೊಂದಿದೆ. ಈ ಎಲ್ಲಾ ಸೌಲಭ್ಯಗಳು ಸೇರಿದಂತೆ ಇನ್ನೂ ಹಲವು ಸೌಕರ್ಯಗಳನ್ನು ನಿಲ್ದಾಣದಲ್ಲಿ ಒದಗಿಸಲಾಗಿದೆ ಎಂದು ನೆಲಮಹಡಿ ಸೆಕ್ಷನ್‌ನ ಮುಖ್ಯ ಇಂಜಿನಿಯರ್ ಹೆಗ್ಗಾರೆಡ್ಡಿ ತಿಳಿಸಿದರು.
ಯಾವುದೇ ಲೋಪವಿಲ್ಲದಂತೆ ಮೆಜೆಸ್ಟಿಕ್ ನಿಲ್ದಾಣವನ್ನು ಅಚುಕಟ್ಟಾಗಿ ಕಟ್ಟಲಾಗುತ್ತಿದೆ. ಅಷ್ಟೇ ಅಲ್ಲದೆ ದೇಶದಲ್ಲಿಯೇ ಮಾದರಿ ಸ್ಟೇಷನ್ ಆಗಿ ರೂಪಿಸೋ ಎಲ್ಲಾ ಪ್ರಯತ್ನಗಳನ್ನು ಸಹ ಮೆಟ್ರೋ ಅಧಿಕಾರಿಗಳು ಮಾಡುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಉದ್ಘಾಟನೆಯಾಗಲಿದೆ.

Comments are closed.