ಕರ್ನಾಟಕ

ಸರ್ಕಾರದ ಮೂಗನ್ನು ಕತ್ತರಿಸುತ್ತೇವೆ: ಕರ್ನಾಟಕಕ್ಕೆ ಎಂಇಎಸ್ ಸವಾಲು

Pinterest LinkedIn Tumblr

mesಬೆಳಗಾವಿ: ರಾಮಾಯಣದಲ್ಲಿ ಶೂರ್ಪನಕಿಯ ಮೂಗು ಕತ್ತರಿಸಿದ ಹಾಗೇ ರಾಜ್ಯ ಸರ್ಕಾರದ ಮೂಗನ್ನು ಕತ್ತರಿಸುತ್ತೇವೆ. ಇದೇ ತಿಂಗಳ ಮೂರನೇ ವಾರದಲ್ಲಿ ನಡೆಯುವ ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳ ನಡೆಸಲಾವುದು. ಮಹಾಮೇಳ ಹಾಗೂ ಕರಾಳ ದಿನ ಆಚರಣೆ ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂದು ಎಂಇಎಸ್ ಮುಖಂಡರಾದ ಮನೋಹರ್ ಕಿಣೇಕರ್, ದೀಪಕ ದಳವಿ ರಾಜ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

ಈ ಮೂಲಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಣೆ ಮಾಡಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಎಂಇಎಸ್ ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. 2006ರಲ್ಲಿ ಬೆಳಗಾವಿ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳ ಆಯೋಜನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಮುಖಭಂಗ ಮಾಡಿತ್ತು. ನವೆಂಬರ್ ಮೂರನೇ ವಾರದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು. ಇದಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳ ನಡೆಸಲು ನಿರ್ಧರಿಸಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಎಂಇಎಸ್ ಮತ್ತೊಮ್ಮೆ ಸೆಡ್ಡು ಹೊಡೆಯಲಿದೆ.

ಎಂಇಎಸ್ ಮುಖಂಡರು ಇಂದು ಬೆಳಗಾವಿಯ ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಎನ್. ಜಯರಾಮ್ ಅವರನ್ನು ಭೇಟಿಯಾಗಿ ಬಂಧಿತ ಎಂಇಎಸ್ ಕಾರ್ಯಕರ್ತರ ಬಿಡುಗಡೆಗೆ ಆಗ್ರಹಿಸಿದ್ರು. ಆದರೆ ಎಂಇಎಸ್ ನಾಯಕರ ಬೇಡಿಕೆಗೆ ಡಿಸಿ, ನಗರ ಪೊಲೀಸ್ ಆಯುಕ್ತ ಕೃಷ್ಣ ಭಟ್ ಯಾವುದೇ ರೀತಿಯ ಸೊಪ್ಪು ಹಾಕಲಿಲ್ಲ. ರಾಜ್ಯೋತ್ಸವದ ದಿನ ಕರಾಳ ದಿನ ಆಚರಣೆ ಮಾಡುವುದು ತಪ್ಪು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Comments are closed.