ಮಂಡ್ಯ (ನ.03): ವಿನೂತನ ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿರುವ ಮಂಡ್ಯದ ಜನತೆ ಇಂದು ಮಾಜಿ ಸಚಿವ ಅಂಬರೀಶ್ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಸಚಿವ ಸ್ಥಾನ ಹೋದ ಮೇಲೆ ಮಂಡ್ಯ ಕ್ಷೇತ್ರದಿಂದ ನಾಪತ್ತೆಯಾಗಿರುವ ಮಂಡ್ಯ ಶಾಸಕ ಅಂಬರೀಶ್ ವಿರುದ್ಧ ಮಂಡ್ಯದ ಜನಶಕ್ತಿ ವೇದಿಕೆ ಮತ್ತು ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ಅಂಬರೀಶ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದ ಕಾವೇರಿ ಭವನದಲ್ಲಿರುವ ಅಂಬರೀಶ್ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಕಚೇರಿಯಲ್ಲಿ ಖಾಲಿ ಕುರ್ಚಿಗೆ ಅಂಬರೀಶ್ ಭಾವಚಿತ್ರದ ಫ್ಲೆಕ್ಸ್ ಇಟ್ಟು ಫ್ಲೆಕ್ಸ್ ಮುಂದೆ ಮನವಿ ಪತ್ರಗಳನ್ನು ಇಟ್ಟು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಇಟ್ಟು ಸರ್ಕಾರದ ಗಮನ ಸೆಳೆದು ರೈತ್ರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.