ಭೋಪಾಲ್ (ನ.01): ಜೈಲಿನಿಂದ ಪರಾರಿಯಾಗಿ ಎನ್‌ಕೌಂಟರ್‌ನಲ್ಲಿ ಹತರಾದ ಶಂಕಿತ ಸಿಮಿ ಉಗ್ರರ ತಲೆ ಮೇಲೆ ತಲಾ 5 ಲಕ್ಷ ಬಹುಮಾನವನ್ನು ಮಧ್ಯಪ್ರದೇಶ ಸರ್ಕಾರ ಘೋಷಿಸಿತ್ತು. ಈಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಬಹುಮಾನದ ಕಿಡಿ ಹೊತ್ತಿಕೊಂಡಂತಿದೆ.
ಉಗ್ರರು ಅಡಗಿರುವ ಮಾಹಿತಿ ಪೊಲೀಸರಿಗೆ ನಾವು ತಿಳಿಸಿದ್ದೇವೆ. ಈ ಹಿನ್ನೆಲೆ ಪೊಲೀಸರು ಉಗ್ರರನ್ನು ಹೊಡೆದು ಹಾಕಿದ್ದಾರೆ. ಈ ಬಹುಮಾನ ನಮಗೆ ಸೇರಬೇಕೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಆದರೆ ಪೊಲೀಸರು ಹೇಳುವುದೇ ಬೇರೆ. ಮಾಹಿತಿದಾರರಿಂದ ನಮಗೆ ಉಗ್ರರ ಅಡುಗು ತಾಣ ಪತ್ತೆಯಾಗಿದೆ. ಬಳಿಕ ಅವರನ್ನು ಎನ್‌ಕೌಂಟರ್ ಮಾಡಲಾಗಿದೆ ಎಂಬುದು ಪೊಲೀಸರ ವಾದವಾಗಿದೆ.
ಗ್ರಾಮಸ್ಥರು ಮತ್ತು ಪೊಲೀಸರ ಭಿನ್ನ ಭಿನ್ನ ಮಾಹಿತಿಯಿಂದಾಗಿ ಸರ್ಕಾರಕ್ಕೆ ತಲೆನೋವಾಗಿದ್ದು, 40 ಲಕ್ಷ ನಗದು ಬಹುಮಾನ ಯಾರ ಪಾಲಾಗಲಿದೆ ಎಂಬುವುದು ತನಿಖೆ ನಂತರವೇ ತಿಳಿಯಲಿದೆ.
ರಾಷ್ಟ್ರೀಯ
Comments are closed.