ಬೆಂಗಳೂರು(ನ.01): ‘ಜೈ ಕರ್ನಾಟಕ ಮಾತೆ’ ನಾಡಗೀತೆಯನ್ನು ಈವರೆಗೂ ಒಂದೇ ಶೈಲಿಯಲ್ಲಿ ಹಾಡುತ್ತಿದ್ದೆವು ಆದರೀಗ ಈ ನಾಡಗೀತೆಗೆ ಡಾ. ಶಮಿತಾ ಮಲ್ನಾಡ್ ಹೊಸ ರೂಪವನ್ನು ನೀಡಿದ್ದಾರೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕದ 5 ತಲೆಮಾರಿನ 59 ಹಿನ್ನಲೆ ಗಾಯಕರು ಒಟ್ಟಿಗೆ ಸೇರಿ ಹಾಡಿರುವುದು ಇದರ ಮತ್ತೊಂದು ವಿಶೇಷವಾಗಿದೆ.
‘ಮಧುರ ಪಿಸು ಮಾತಿಗೆ…’ ಎಂಬ ಭಾರೀ ಪ್ರಶಂಸೆಗೆ ಪಾತ್ರವಾದ ಹಾಡನ್ನು ಹಾಡಿ ಕನ್ನಡಿಗರ ಮನಗೆದ್ದ ಕನ್ನಡತಿ ಡಾ. ಶಮಿತಾ ಮಲ್ನಾಡ್ ಹೊಸತದೊಂದಿಗೆ ವಿಭಿನ್ನವಾಗಿ ಮೂಡಿಬಂದಿರುವ ನಾಡಗೀತೆಗೆ ಸಂಗೀತಾ, ಪರಿಕಲ್ಪನೆ, ನಿರ್ವಹಣೆ, ನಿರ್ದೇಶನವನ್ನು ನೀಡಿದ್ದಾರೆ.