ಕರ್ನಾಟಕ

ವೃದ್ಧಾಪ್ಯ ವಯಸ್ಸಿನ ಸುಖಿ ಜೀವನದ ಗುಟ್ಟು

Pinterest LinkedIn Tumblr

old_couple

ನಮ್ಮ ದೇಶದ ಕೆಲವು ಭಾಗಗಳಲ್ಲಿ ಜನರು 90ರಿಂದ 100-105 ವರ್ಷಗಳವರೆಗೂ ಜೀವಿಸಿದ, ಜೀವಿಸುತ್ತಿರುವ ಉದಾಹರಣೆಗಳಿವೆ. ಇವರ ದೀರ್ಘಾಯುಷ್ಯದ ಗುಟ್ಟುಗಳೇನೆಂದರೆ, ಆನುವಂಶಿಕತೆಯ ಜೊತೆ ಶಿಸ್ತಿನ ಜೀವನ ಶೈಲಿ, ನಡವಳಿಕೆ, ಪರಿಸರ, ಆಹಾರಕ್ರಮ.

ವೃದ್ಧಾಪ್ಯದ ವಯಸ್ಸನ್ನು ಇಷ್ಟೇ ಎಂದು ನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ ಸಾಮಾನ್ಯವಾಗಿ ವಯಸ್ಸಿಗೆ ಸಂಬಂಧಿಸಿದ ದೈಹಿಕ ಬದಲಾವಣೆಗಳು ಅನೇಕರಲ್ಲಿ 30 ವರ್ಷಗಳಿಗಿಂತಲೂ ಮುಂಚಿತವಾಗಿಯೇ ಆರಂಭಗೊಳ್ಳುತ್ತವೆ.

ವೃದ್ದಾಪ್ಯ ಮನುಷ್ಯನ ಜೀವನದ ಅಂತಿಮ ಘಟ್ಟ. ನಮ್ಮನ್ನು ಪ್ರೀತಿಯಿಂದ ಆರೈಕೆ ಮಾಡಿದ ಕೈಗಳು ಮುಪ್ಪುತಡೆಗಟ್ಟಲು ಆರಂಭಗೊಳ್ಳುತ್ತದೆ. ಇದು ಕಿರಿಯರ ಮೇಲಿನ ಜವಾಬ್ದಾರಿ ಹೆಚ್ಚಿಸುತ್ತದೆ. ‘ಇಂದು ಅವರು.. ನಾಳೆ ನಾವು..’ ಎಂಬ ಸರಳ ವಿಚಾರ ಅರಿತುಕೊಳ್ಳುವುದು ಸುಖಿ ಕುಟುಂಬಕ್ಕೆ ರಹದಾರಿ.

ಯುನೈಟೆಡ್ ನೇಷನ್ಸ್ ಪಾಪ್ಯೂಲೇಶನ್ ಫಂಡ್ ಮತ್ತು ಹೆಲ್ಪ್‌ಏಜ್ ಇಂಡಿಯಾ ವರದಿ ಪ್ರಕಾರ 2011ರಲ್ಲಿ ಭಾರತದಲ್ಲಿ 90 ದಶಲಕ್ಷ ವಯೋವೃದ್ದರು ಇದ್ದಾರೆ. ಇದು 2026 ತಲುಪುವಷ್ಟರಲ್ಲಿ 173 ದಶಲಕ್ಷ ತಲುಪಲಿದೆ. ಇನ್ನೂ ಬೇಸರದ ಸಂಗತಿ ಎಂದರೆ, 90ದಶಲಕ್ಷ ವಯೋವೃದ್ದರಲ್ಲಿ ಸುಮಾರು 30 ಮಿಲಿಯನ್ ವೃದ್ದರು ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ವಯೋವೃದ್ದರಿಗೆ ಯೌವನದವರಿಗಿಂತ ಹೆಚ್ಚಿನ ಮಾನಸಿಕ ಸ್ಥೈರ್ಯದ ಅಗತ್ಯವಿದೆ. ಅದರಲ್ಲೂ, ಒಂಟಿತನ, ಅಸಾಯಕತೆ, ಬೇಸರ ಹಾಗೂ ಹೆದರಿಕೆಗಳಿಂದ ಅವರನ್ನು ದೂರವಿರಿಸಲು ಶ್ರಮಿಸಬೇಕಾಗುತ್ತದೆ. ವಯೋವೃದ್ದರು ಯೌವನದವರಿಗಿಂತ ದುರ್ಬಲರಾಗಿರುತ್ತಾರೆ. ಅವರು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುತ್ತಾರೆ. ಅವರು ವಾಸಿಸುವ ಸ್ಥಳ ಸುರಕ್ಷಿತವಾಗಿದೆ ಎಂಬ ಆತ್ಮ ಸ್ಥೈರ್ಯ ನೀಡುವ ಅಗತ್ಯವಿರುತ್ತದೆ.

ಇನ್ನೂ ಮುಖ್ಯವಾಗಿ, ಅವರಿಗೆ ಹೆಚ್ಚಿನ ಗಮನವನ್ನು ನೀಡುವ ಮೂಲಕ ಅವರು ನಮಗೆಷ್ಟು ಮುಖ್ಯ ಎಂದು ತೋರ್ಪಡಿಸುವುದು ಅತ್ಯಗತ್ಯ. ವಯೋವೃದ್ದರ ಬಗ್ಗೆ ಹೆಚ್ಚಿನ ಗಮನ ನೀಡಿದರೂ, ಅವರಿಗೆ ತಮ್ಮ ಜೀವನದ ಬಗ್ಗೆ ಸ್ವಾಭಿಮಾನವಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನದಲ್ಲಿರಿಸಿಕೊಂಡು ಅವರಿಗೆ ಪೂರ್ಣ ಸ್ವಾತ್ರಂತ್ರ್ಯ ನೀಡುವುದು ಉತ್ತಮ. ಭಾವನಾತ್ಮಕವಾಗಿ ಸ್ಪಂದಿಸುವ ಮೂಲಕ ಅವರ ಪ್ರಾಮುಖ್ಯತೆಯನ್ನು ತೋರ್ಪಡಿಸಬೇಕು.

ವಯಸ್ಸಾದಂತೆ ದೈಹಿಕ ಮತ್ತು ಮಾನಸಿಕ ಸಾರ್ಮರ್ಥ್ಯ ಕುಗ್ಗುತ್ತದೆ. ಈ ಭಾವನೆ ಮೂಡದಂತೆ ನೋಡಿಕೊಳ್ಳುವುದು ಮುಖ್ಯ. ಸ್ನೇಹಭರಿತ ಅನ್ಯೋನ್ಯದ ಸಂವೃದ್ಧ ಜೀವನವನ್ನು ವೃದ್ದರು ಎದುರು ನೋಡುತ್ತಿರುತ್ತಾರೆ. ವಯೋವೃದ್ದರ ಸಮಕಾಲಿಕರು ಹೆಚ್ಚಾಗಿ ಜೊತೆಯಾಗುವ ಸ್ಥಳಗಳಿಗೆ ಕರೆದೊಯ್ಯವುದು ಅವರನ್ನು ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ. ವಯಸ್ಸಾದಂತೆ ವೃದ್ದರು ನಂಬಿಕೆಯಿಲ್ಲದ ಮತ್ತು ಗುರಿಯಿಲ್ಲದ ಜೀವನ ಎಂಬ ಭಾವನೆಗೆ ಒಳಗಾಗುತ್ತಾರೆ. ಇದನ್ನು ತಪ್ಪಿಸಲು, ವೃದ್ದರಲ್ಲಿ ಏಕಾಂತತೆ ಮತ್ತು ಖಿನ್ನತೆ ಮೂಡದಂತೆ ಜಾಗೃತವಹಿಸಬೇಕು.

ಅಲ್ಲದೆ, ಜೀವನದ ಉದ್ದೇಶ ಮತ್ತು ಧನಾತ್ಮದ ಭಾವನೆ ಒಡಮೂಡಿಸಬೇಕು. ವೃದ್ದರು ಆಯಾಸಗೊಳ್ಳುವುದು ಸಾಮಾನ್ಯ. ಆದರೆ, ಈ ನಡವಳಿಕೆಯನ್ನು ಸೋಮಾರಿತನ ಎಂದು ಭಾವಿಸುವುದು ತಪ್ಪು. ಇದು ಅವರು ಸೇವಿಸುವ ಔಷಧಿಯ ಅಡ್ಡ ಪರಿಣಾಮ ಅಥವಾ ದೈಹಿಕ ಸಾಮರ್ಥ್ಯ ಕುಗ್ಗಿರುವುದರಿಂದ ಇಂತಹ ನಡವಳಿಕೆಗೆ ಕಾರಣವಾಗಿರಬಹುದು. ಈ ರೀತಿಯ ನಡವಳಿಕೆ ಕಂಡುಬಂದಲ್ಲಿ, ಕೂಡಲೇ ವೈದ್ಯರನ್ನು ಪರ್ಕಿಸುವುದು ಸೂಕ್ತ.

ಸಲಹೆ, ಸೂಚನೆಗಳು :
ಅವರ ಮಾತನ್ನು ಆಸಕ್ತಿಯಿಂದ ಆಲಿಸುವುದು ಮತ್ತು ಉತ್ತಮವಾಗಿ ಪ್ರತಿಕ್ರೀಯಿಸುವುದು. ದೂರವಾಣಿ ಕರೆಯ ಸಂದರ್ಭದಲ್ಲಿ ತಾಳ್ಮೆಯಿಂದ ಮಾತನಾಡುವುದು.
ಅವರ ಮೆಚ್ಚಿನ ಸ್ಥಳದಲ್ಲಿ ಊಟ-ಉಪಹಾರ ಸೇವಿಸಲು ಅವಕಾಶ ಒದಗಿಸುವುದು.
ಕುಟುಂಬದ ಸದಸ್ಯರೊಂದಿಗೆ ಬೆರೆಯಲು ವ್ಯವಸ್ಥೆ ಮತ್ತು ಅವರ ನೆಚ್ಚಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸುವುದು.
ಸಾರ್ವಜನಿಕ ಸ್ಥಳಗಳಾದ ಉದ್ಯಾನವನ, ಸಮುದ್ರ ಕಿನಾರೆಗಳಿಗೆ ಕರೆದೊಯ್ಯುವುದು.
ಪ್ರಯಾಣದ ಜೊತೆಯಲ್ಲಿ ಅವರ ನೆಚ್ಚಿನ ಉಡುಪು ಮತ್ತು ತಿನಿಸು ಅವರೇ ಆಯ್ಕೆ ಮಾಡಲು ಅವಕಾಶ ಒದಗಿಸುವುದು.
ದೃಷ್ಠಿ ದುರ್ಬಲರಾಗಿದ್ದರೆ, ಪೇಪರ್, ಪುಸ್ತಕ, ಗ್ರೀಟಿಂಗ್ ಕಾರ್ಡ್‌ಗಳನ್ನು ಓದಿ ಹೇಳುವುದು.
ಅವರಿಗೆ ಇಷ್ಟವಾದ ಟಿವಿ ಶೋ ನೋಡಲು ಆರಾಮದಾಯಕವಾದ ಕುರ್ಚಿಯ ವ್ಯವಸ್ಥೆ ಮಾಡುವುದು.

Comments are closed.