ಕರ್ನಾಟಕ

ಒತ್ತಡ ರಹಿತ ಜೀವನಕ್ಕಾಗಿ ಕೆಲವು ಥೆರಪಿಗಳು

Pinterest LinkedIn Tumblr

therphy_wellness

ಮಂಗಳೂರು: ಒಟ್ಟಿನಲ್ಲಿ ಒತ್ತಡ ಎಂದುಕೊಂಡು ಮತ್ತಷ್ಟು ಒತ್ತಡಕ್ಕೊಳಗಾಗುವ ಬದಲು ಈ ಥೆರಪಿಗಳು ನಿಮ್ಮ ಜೀವನದಲ್ಲಿ ಸುಲಭವಾಗಿ ಮಾಡಬಹುದಾಗಿದ್ದು, ಇವುಗಳಿಂದ ಒತ್ತಡ ರಹಿತ ಜೀವನ ನಿಮ್ಮ ಜೀವನಕ್ಕೆ ಹೊಸ ಆಯಾಮವನ್ನು ತಂದುಕೊಡಬಹುದಾಗಿದೆ.

ಅವುಗಳೆಂದರೆ :
ವಿಷುವಲೈಸೇಷನ್ : ಈ ಚಿಕಿತ್ಸೆ ವಿಧಾನವು ಯೋಚನೆ, ವಾಸನೆ ಮತ್ತು ಸ್ಪರ್ಶದಂತಹ ಮೆದುಳಿನ ಕ್ರಿಯೆಗಳನ್ನು ಗರಿಷ್ಠ ಮಟ್ಟದಲ್ಲಿ ಕಣ್ಣೆದುರು ತಂದುಕೊಳ್ಳುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಸಮುದ್ರದ ದಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಿ ಎಂದು ಭಾವಿಸಿಕೊಳ್ಳಿ. ಕಣ್ಣೆದುರು ವಿಶಾಲ ನೀಲ ಸಮುದ್ರವನ್ನು ಊಹಿಸಿಕೊಳ್ಳಿ, ಸಾಗರದ ಅಲೆಗಳ ಸುಮಧುರ ಶಬ್ದ ಮತ್ತು ಸೂರ್ಯನ ಹಿತಕರ ಬಿಸಿಲು ಮೈಮೇಲೆ ಬೀಳುತ್ತಿದೆ ಎಂದು ಊಹಿಸಿಕೊಳ್ಳಿ. ದೇಹ ಮತ್ತು ಮನಸ್ಸು ತನ್ನಿಂದ ತಾನೇ ನಿರಾಳತೆಗೆ ಒಳಗಾಗುವುದನ್ನು ಅನುಭವಿಸಿ.

ಅಟೋಜೆನಿಕ್ ರಿಲ್ಯಾಕ್ಸೇಶನ್ ಟೆಕ್ನಿಕ್ : ಇದು ಕೂಡ ಮೆದುಳಿನ ಯೋಚನಾ ಲಹರಿಯನ್ನು ಕಣ್ಣೆದುರು ತಂದುಕೊಳ್ಳುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ವಿಧಾನ. ಆಳವಾದ ಯೋಚನೆ ಲಹರಿಗೆ ಇಳಿದು, ಮೆದುಳಿನಲ್ಲಿ ಏನಾದರೂ ಊಹಿಸಿಕೊಳ್ಳಿ. ಇದು ಮೆದುಳಿನ ಮಾಂಸಖಂಡಗಳಲ್ಲಿ ಉಂಟಾದ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಕೈ-ಕಾಲು ಸಡಿಲ ಬಿಟ್ಟು, ಹಗುರವಾಗಿ ಉಸಿರಾಡುತ್ತಾ ನಿಸರ್ಗ ಸೌಂದರ್ಯದ ಊಹನೆಯನ್ನು ಮಾಡಿಕೊಳ್ಳಬಹುದು.

ಪ್ರೊಗ್ರೆಸಿವ್ ಮಸಲ್ ರಿಲ್ಯಾಕ್ಸೇಶನ್ ಟೆಕ್ನಿಕ್ : ಈ ಥೆರಪಿಯಲ್ಲಿ ಮೊದಲಿಗೆ ಐದು ಸೆಕೆಂಡುಗಳ ಕಾಲ ಮಾಂಸಖಂಡಗಳನ್ನು ಬಿಗಿ ಮಾಡಿಕೊಳ್ಳಿ. ಬಳಿಕ ಸಡಿಲ ಮಾಡಿಕೊಳ್ಳಿ. ಇದರಿಂದ ಮಾಂಸಖಂಡಗಳ ಬಿಗಿತ ಮತ್ತು ಸಡಿಲದ ನಡುವಿನ ಅಂತರದ ಅನುಭವ ನಿಮಗಾಗುತ್ತದೆ. ಕಾಲ ಹೆಬ್ಬೆರಳ ತುದಿಯಿಂದ ಆರಂಭಿಸಿ ಕುತ್ತಿಗೆಯವರೆಗೆ ನಿಧಾನವಾಗಿ ಒಂದೊಂದೇ ಭಾಗದ ಮಾಂಸ ಖಂಡಗಳನ್ನು ಬಿಗಿಗೊಳಿಸುತ್ತಾ, ಸಡಿಲಗೊಳಿಸುತ್ತಾ ಸಾಗಿ. ದೇಹ ತನ್ನಿಂದಾತೇ ಮತ್ತೆ ಹುಮ್ಮಸ್ಸು ಪಡೆಯುತ್ತದೆ.

ಥೈ ಚಿ ವ್ಯಾಯಾಮ : ಇದು ನಿಧಾನಗತಿಯ ಆದರೆ ಎಲ್ಲಿಯೂ ನಿಲ್ಲದೆ ನಡೆಸುವ ದೈಹಿಕ ಕಸರತ್ತು. ಏಕಾಗ್ರತೆ ಮತು ಆಳ ಉಸಿರಾಟದ ಮೂಲಕ ಇದನ್ನು ಮಾಡಬೇಕು. ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಮಾನಸಿಕ ಉದ್ರೇಕವನ್ನು ಇಲ್ಲವಾಗಿಸುತ್ತದೆ. ಎನರ್ಜಿ ಮತ್ತು ದೇಹ ಕ್ಷಮತೆಯನ್ನು ಕೂಡ ಇದು ಹೆಚ್ಚಿಸಲು ನೆರವಾಗುತ್ತದೆ.

ಇತಂಹ ಸುಲಭ ಹಾಗೂ ಸರಳವಾದ ಥೆರಪಿ ನಿಮ್ಮಲ್ಲಿ ಅಳವಡಿಸಿ ಸುಂದರ ಜೀವನ ನಿಮ್ಮದಾಗಿಸಿ….

Comments are closed.