ಕರ್ನಾಟಕ

ದೃಶ್ಯಂ ಸಿನಿಮಾದಂತೆ ಕೃಷಿ ಪದವಿಧರೆ ಅರ್ಪಿತಾ ಕೊಲೆ

Pinterest LinkedIn Tumblr

krushiಹುಬ್ಬಳ್ಳಿ(ಅ.18): ವಿಜಯಪುರ ಮೂಲದ ಕೃಷಿ ಪದವೀಧರೆ ಅಪಿ೯ತಾ ನಿಗೂಢ ಕೊಲೆ ಪ್ರಕರಣವನ್ನ ಹುಬ್ಬಳ್ಳಿಯ ಪೊಲೀಸರು ಒಂದೂವರೆ ವಷ೯ದ ಬಳಿಕ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮದುವೆಯಾಗುವಂತೆ ಪೀಡಿಸಿದಕ್ಕೆ ಅಪಿ೯ತಾಳ ಪ್ರಿಯಕರ, ಪಿಎಚ್ ಡಿ ವ್ಯಾಸಂಗ ಮಾಡುತ್ತಿರುವ ಅರುಣ ಪಾಟೀಲನೇ ಉಸಿರು ಗಟ್ಟಿಸಿ ಕೊಲೆ ಮಾಡಿ ಹೊಲದಲ್ಲಿ ಹೂತಿಟ್ಟಿರುವುದನ್ನ ಕಸಬಾ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.
ಕಳೆದ ವಷ೯ ಮೇ 30ರಂದು ಅಪಿ೯ತಾಳ ಕೊಲೆಯಾಗಿತ್ತು. ಕೊಲೆ ಮಾಡಿ ಹುಬ್ಬಳ್ಳಿಯ ಹೊರವಲಯದ ಹೊಲವೊಂದರಲ್ಲಿ ಹೂತಿಡಲಾಗಿತ್ತು. ಕೊಲೆಯಾದ ಮೂರು ದಿನದ ಬಳಿಕ ಮಳೆ ಬಂದಿದ್ದರಿಂದ ಹೂತಿಟ್ಟ ಶವ ಹೊರಬಂದು ಪ್ರಕರಣ ಬೆಳಕಿಗೆ ಬಂದಿತ್ತು. ಆರಂಭದಲ್ಲಿ ಅಪರಿಚಿತ ಶವ ಎಂದು ಹುಬ್ಬಳ್ಳಿಯ ಕಸಬಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಅಪಿ೯ತಾಳ ತಂದೆ ಗಿರಿಮಲ್ಲ ಬಿರಾದಾರ ಸ್ನೇಹಿತನ ಜೊತೆ ವ್ಯಾಸಂಗ ಮಾಡಲು ವಿಜಯಪುರದಿಂದ ಧಾರವಾಡಕ್ಕೆ ಬಂದಿದ್ದ ಅಪಿ೯ತಾ ಕಾಣೆಯಾಗಿದ್ದಾಳೆ ಎಂದು ಧಾರವಾಡದ ಉಪನಗರ ಠಾಣೆಗೆ ದೂರು ನೀಡಿದ್ದರು.. ಕೆಲ ದಿನಗಳ ಬಳಿಕ ಹುಬ್ಬಳ್ಳಿ ಹೊರವಲಯದಲ್ಲಿ ಸಿಕ್ಕ ಮೃತದೇಹ ಅಪಿ೯ತಾಳದ್ದೆ ಎಂದು ಆಕೆಯ ತಂದೆ ಗುರುತಿಸಿದ್ದರು..ಆದರೆ, ಕೊಲೆ ಪ್ರಕರಣ ಮಾತ್ರ.ನಿಗೂಡವಾಗಿತ್ತು…ಇದೀಗ, ಹುಬ್ಬಳ್ಳಿ ಕಸಬಾ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ..ಅಪಿ೯ತಾಳ ಪ್ರಿಯಕರ ಅರುಣ ಕೊಲೆ ಮಾಡಿರುವದು ಬಯಲಾಗಿದೆ.
ಪದವಿಯಲ್ಲೇ ಚಿಗುರಿತ್ತು ಪ್ರೇಮ: ಅಪಿ೯ತಾ ಮತ್ತು ಅರುಣ ಇಬ್ಬರು ಮೂಲತಃ ವಿಜಯಪುರ ಜಿಲ್ಲೆಯವರಾಗಿದ್ದು, ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿಯಲ್ಲಿ ಪದವಿ ವ್ಯಾಸಂಗ ಮಾಡುವಾಗ ಪರಸ್ಪರ ಪ್ರೀತಿಸುತ್ತಿದ್ದರು,ಪದವಿ ಮುಗಿದ ಬಳಿಕ ಅರುಣ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿನ ಜಿಕೆವಿಕೆ ಸೇರಿಕೊಳ್ಳುತ್ತಾರೆ. ಈ ವೇಳೆ, ಎಂಎಸ್ಸಿ ಗೆ ಸೀಟು ಸಿಗದ ಅಪಿ೯ತಾ ಉನ್ನತ ವ್ಯಾಸಂಗದ ತಯಾರಿಗಾಗಿ ವಿಜಯಪುರದಿಂದ ಬಂದು ಧಾರವಾಡದ ಸ್ನೇಹಿತೆಯ ರೂಂ ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಅಪಿ೯ತಾ ಮದುವೆಯಾಗುವಂತೆ ಅರುಣನಿಗೆ ಪೀಡಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಮದುವೆಯಾಗಲು ಇಷ್ಟವಿಲ್ಲದ ಅರುಣ ಅಪಿ೯ತಾಳಿಂದ ದೂರಾಗಲು ಪ್ರಯತ್ನಿಸಿದ್ದ, ಇದರಿಂದ ಸಿಟ್ಟಿಗೆದ್ದ ಅಪಿ೯ತಾ ಮನೆಯವರಿಗೆ ಹೇಳುವುದಾಗಿ ಬೆದರಿಸಿದ್ದಳು ಎನ್ನಲಾಗಿದೆ.
ಕೊಲೆ ನಡೆದದ್ದು ಹೇಗೆ..?: ಅಪಿ೯ತಾಳನ್ನ ಕೊಲೆ ಮಾಡುವ ಪ್ಲಾನ್ ಮಾಡಿದ ಅರುಣ ಅದಕ್ಕೆ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಾನೆ. ಅಪಿ೯ತಾ ಧಾರವಾಡದಲ್ಲಿ ಸ್ನೇಹಿತರು ರೂಂ ನಲ್ಲಿರುವುದನ್ನು ತಿಳಿದ ಅರುಣ ಪಾಟೀಲ್, ಮೇ ೩೦ರಂದು ಬೆಂಗಳೂರಿನಿಂದ ಧಾರವಾಡಕ್ಕೆ ಬಂದು ಅಪಿ೯ತಾಳ ಭೇಟಿಯಾಗಿದ್ದ, ಬಳಿಕ ಮಾತನಾಡುವುದಕ್ಕೆಂದು ಹುಬ್ಬಳ್ಳಿಯ ಹೊರವಲಯಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ರಸ್ತೆ ಬದಿಯ ಹೊಲವೊಂದರಲ್ಲಿ ಹೂತಿಟ್ಟು ಪರಾರಿಯಾಗಿದ್ದ. ಅಪಿ೯ತಾಳ ಕೊಲೆ ಪ್ರಕರಣ ಹುಬ್ಬಳ್ಳಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ, ಎಲ್ಲ ಆಯಾಮದಲ್ಲಿ ತನಿಖೆ ಮಾಡಿದ ಪೊಲೀಸರು ಸಣ್ಣ ಸುಳಿವು ಸಿಗದೆ ಕೈಚೆಲ್ಲಿ ಕುಳಿತಿದ್ದರು. ಆದರೆ, ಕೊಲೆಗೂ ಮುನ್ನ ಅರುಣ ಪಾಟೀಲ್ ದೃಶ್ಯಂ ಸಿನಿಮಾ ನೋಡಿ ಅದರಂತೆ ಪಕ್ಕ ಪ್ಲಾನ್ ಮಾಡಿದ್ದ, ಬೆಂಗಳೂರಿನಿಂದ ಧಾರವಾಡಕ್ಕೆ ಬರುವಾಗ ತನ್ನ ಮೊಬೈಲ್ ಅನ್ನು ಬೆಂಗಳೂರಿನ ತನ್ನ ರೂಂ ನಲ್ಲಿಯೇ ಬಿಟ್ಟು ಬಂದಿದ್ದ, ಜೊತೆಗೆ ಅಂದು ತಾನು ಕ್ಲಾಸ್`ಗೆ ಹೊದವನಂತೆ ಹಾಜರಾತಿಯೂ ರಡಿ ಮಾಡಿದ್ದ, ಇದರಿಂದ ಕೊಲೆ ನಡೆದ ದಿನ ಅರುಣ ಪಾಟೀಲ್ ಬೆಂಗಳೂರಿನಲ್ಲಿಯೆ ಇದ್ದವನಂತೆ ದಾಖಲೆ ಸೃಷ್ಟಿಸಿದ್ದ. ಇದರಿಂದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಅನುಮಾನ ಬರಲಿಲ್ಲ, ಬಳಿಕ ಪದೇ ಪದೇ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

Comments are closed.