ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನದ ಸಂಸ್ಥೆಯಾದ ಇನ್ಫೋಸಿಸ್ ಎರಡನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ತನ್ನ ಸಂಸ್ಥೆ ಪ್ರಮುಖ ಅಧಿಕಾರಿಗಳ ಸಂಬಳವನ್ನು ಏರಿಸಿದೆ. ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯು.ಬಿ ಪ್ರವೀಣ್ ರಾವ್ ಹಾಗೂ ಚೀಫ್ ಫೈನಾನ್ಶಿಯಲ್ ಆಫೀಸರ್ (ಸಿಎಫ್‍ಒ) ಎಂಡಿ ರಂಗನಾಥ್ ಅವರ ಸಂಬಳ ವಿವರವನ್ನು ಪ್ರಕಟಿಸಿದೆ.
ಪ್ರವೀಣ್ ರಾವ್ ಅವರಿಗೆ ಈಗ 4.62 ಕೋಟಿ ರೂ. ವಾರ್ಷಿಕ ಸಂಬಳ ಹಾಗೂ ವಾರಿಯಬಲ್ ಪೇ 3.88 ಕೋಟಿ ರೂ. ವಾರ್ಷಿಕ ಸಿಗಲಿದೆ. ಇದರ ಜೊತೆ 4 ವರ್ಷ ಅವಧಿಯ 27,250 ನಿರ್ಬಂಧಿತ ಸ್ಟಾಕ್ ಯೂನಿಟ್(ಆರ್‍ಎಸ್‍ಯು) ಹಾಗೂ 43,000 ಸ್ಟಾಕ್ ಆಯ್ಕೆಗಳನ್ನು ನೀಡಲಾಗಿದೆ.
ರಂಗನಾಥ್, ಮೋಹಿತ್ ಜೋಶಿ (ಫೈನಾನ್ಸ್ ಸರ್ವೀಸಸ್), ಸಂದೀಪ್ ದದ್ಲಾನಿ (ಅಮೆರಿಕಾದ ಕಚೇರಿ ಮುಖ್ಯಸ್ಥ), ರಾಜೇಶ್ ಕೆ ಮೂರ್ತಿ (ಯುರೋಪಿನ ಮುಖ್ಯಸ್ಥ), ರವಿಕುಮಾರ್ ಎಸ್ (ಡೆಲಿವರಿ ಅಧಿಕಾರಿ), ಡೇವಿಡ್ ಕೆನಡಿ (ಸಿಸಿಓ) ಕೃಷ್ಣಮೂರ್ತಿ ಶಂಕರ್ (ಗ್ರೂಪ್ ಹೆಡ್, ಎಚ್ ಆರ್ ಡಿ), ಮಣಿಕಾಂತ ಎಜಿಎಸ್ (ಕಂಪನಿ ಕಾರ್ಯದರ್ಶಿ) ಅವರ ಸಂಬಳ ಬದಲಾವಣೆ 24 ಕೋಟಿ ರೂ. ನಿಂದ 20 ಕೋಟಿ ರೂ. ನಷ್ಟಿದೆ.
ನವೆಂಬರ್ 01, 2016ರಿಂದ ಈ ಮೇಲಿನ ಎಲ್ಲ ಅಧಿಕಾರಿಗಳ ಸಂಬಳ ಬದಲಾವಣೆಯಾಗಲಿದೆ. ಇದೇ ವೇಳೆ ಆಕ್ಟೋಬರ್ 14,2016ರಿಂದ ಜಾರಿಗೆ ಬರುವಂತೆ ಸೂರ್ಯ ಸಾಫ್ಟ್ ವೇರ್ ಸಿಸ್ಟಮ್ಸ್ ನ ಸಿಇಒ ಡಿಎನ್ ಪ್ರಹ್ಲಾದ್ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ತನ್ನ ಬೋರ್ಡ್‍ಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಇನ್ಫೋಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 30ರಂದು ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ 3,606 ಕೋಟಿ ರು. ನಿವ್ವಳ ಲಾಭವನ್ನು ಇನ್ಫೋಸಿಸ್ ಗಳಿಸಿದೆ. ಜೂನ್ 30ರಂದು ಮುಕ್ತಾಯವಾಗಿದ್ದ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ 3,436 ಕೋಟಿ ರು. ಲಾಭ ಗಳಿಸಿತ್ತು. ಈ ಮೂಲಕ ಮೊದಲನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಹೋಲಿಸಿದರೆ ಶೇ. 4.95ರಷ್ಟು ಲಾಭದಲ್ಲಿ ಏರಿಕೆಯಾಗಿದೆ.
Comments are closed.