ಬೆಂಗಳೂರು, ಅ. ೧೩ – ನಗರದ ಹೈ ಗ್ರೌಂಡ್ಸ್‌ನಿಂದ ಹೆಬ್ಬಾಳದವರೆಗೆ `ಉಕ್ಕಿನ ಸೇತುವೆ’ ನಿರ್ಮಾಣ ವಿಚಾರದಲ್ಲಿ ಎಲ್ಲರ ಅಭಿಪ್ರಾಯಗಳನ್ನು ಪರಿಗಣನೆ ಮಾಡಿಯೇ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಕ್ಕಿನ ಸೇತುವೆ ನಿರ್ಮಾಣದ ಸಂಬಂಧ ಕೆಲವರ ಆಕ್ಷೇಪಣೆಗಳಿಗೆ ವಿವರಣೆ ನೀಡಲಾಗುವುದು, ಎಲ್ಲವನ್ನೂ ಬಿ.ಡಿ.ಎ. ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಜನಹಿತ ತೀರ್ಮಾನ
ಇದೇ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಜನ ಹಿತಕ್ಕಾಗಿಯೇ ಸ್ಟೀಲ್ ಬ್ರಿಡ್ಜ್ ನಿರ್ಮಾಣ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಗರದ ಹೈಗ್ರೌಂಡ್ಸ್‌ನಿಂದ ಹೆಬ್ಬಾಳದವರೆಗೂ ಮೇಲ್ಸೇತುವೆ ನಿರ್ಮಾಣದ ಬಗ್ಗೆ 2010ರಲ್ಲೇ 60 ದಿನ ಬಿಜೆಪಿ ಸರ್ಕಾರ ಯೋಜನೆ ಸಿದ್ಧಪಡಿಸಲು ಸೂಚಿಸಿತ್ತು. 2014ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪ್ರಸ್ತಾಪಿಸಿದ್ದರು.
ಈ ಸ್ಟೀಲ್ ಬ್ರಿಡ್ಜ್ ಹೆಬ್ಬಾಳ ಮೇಲ್ಸೇತುವೆವರೆಗೂ ಮಾತ್ರ ಅಲ್ಲ, ಅದನ್ನು ದಾಟಿ ಎಸ್ಟೀಮ್ ಮಾಲ್‌ವರೆಗೂ ಇರುತ್ತದೆ ಎಂದು ಸಚಿವ ಜಾರ್ಜ್ ಹೇಳಿದರು. ಈ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಬಿ.ಡಿ.ಎ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.
ಎಲ್ಲಾ ಆಯಾಮಗಳನ್ನು ಪರಿಶೀಲನೆ ನಡೆಸಿದ ನಂತರವೇ ಸಚಿವ ಸಂಪುಟದಲ್ಲಿ ಉಕ್ಕಿನ ಸೇತುವೆ ನಿರ್ಮಾಣದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
Comments are closed.