ಕರ್ನಾಟಕ

ಚೀನಾದ ಕೃತಕ ಮೊಟ್ಟೆಗಳು ತಮಿಳುನಾಡಿನಿಂದ ರಾಜ್ಯಕ್ಕೆ ಸರಬರಾಜು

Pinterest LinkedIn Tumblr

 

egg

ತಿರುವನಂತಪುರ : ಚೀನಾದ ಮೊಬೈಲ್ ಸೆಟ್ ಸಹಿತ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು ಭಾರತದಲ್ಲಿ ಲಭ್ಯವಾಗುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕೇರಳದಲ್ಲಿ ಚೀನಾದಲ್ಲಿ ತಯಾರಾದ ಮೊಟ್ಟೆಗಳು ಲಭ್ಯವಾಗುತ್ತಿವೆ ಎಂಬ ಸುದ್ದಿ ವರದಿಯಾಗಿದೆ.

ಕೇರಳದ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಚೀನಾದ ಕೃತಕ ಮೊಟ್ಟೆಗಳು ಲಭ್ಯವಾಗುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ಸುದ್ದಿಯ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಆದೇಶಿಸಿದ್ದಾರೆ.

”ಕೃತಕ ಚೀನಾ ಮೊಟ್ಟೆಗಳು ಲಭ್ಯವಾಗುತ್ತಿರುವ ಬಗ್ಗೆ ನಾನು ಯಾವುದೇ ದೂರುಗಳನ್ನು ಈವರೆಗೆ ಸ್ವೀಕರಿಸಿಲ್ಲ. ಆದರೆ, ಮಾಧ್ಯಮ ವರದಿಯನ್ನು ಪರೀಕ್ಷಿಸಲಿದ್ದೇವೆ. ರಾಜ್ಯದಲ್ಲಿ ಯಾವ ಭಾಗದಲ್ಲಿ ಇಂತಹ ವಸ್ತು ಲಭ್ಯವಿದೆ ಎಂದು ಪತ್ತೆ ಹಚ್ಚಲಿದ್ದೇವೆ” ಎಂದು ಶೈಲಜಾ ತಿಳಿಸಿದ್ದಾರೆ.

ಮಾಧ್ಯಮಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಉತ್ಪನ್ನಗಳು ಲಭ್ಯವಿದೆಯೇ ಎಂದು ಪತ್ತೆ ಹಚ್ಚುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ಸೂಚನೆ ನೀಡುವೆ. ಯಾರಾದರೂ ಒಂದು ಸ್ಯಾಂಪಲ್ನ್ನು ತಂದುಕೊಟ್ಟರೆ, ಅದನ್ನು ತಕ್ಷಣವೇ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು” ಎಂದು ಶೈಲಜಾ ತಿಳಿಸಿದ್ದಾರೆ.

ಚೀನಾದ ಕೃತಕ ಮೊಟ್ಟೆಗಳು ತಮಿಳುನಾಡಿನಿಂದ ರಾಜ್ಯಕ್ಕೆ ಸರಬರಾಜಾಗುತ್ತಿವೆ. ತಮಿಳುನಾಡು ಗಡಿಭಾಗ ಇಡುಕ್ಕಿ ಜಿಲ್ಲೆಯಲ್ಲಿ ಚೀನಾದ ಕೃತಕ ಮೊಟ್ಟೆಗಳು ಸಿಗುತ್ತವೆ ಎಂದು ಇತ್ತೀಚೆಗೆ ವರದಿಯಾಗಿತ್ತು.
ಇಡುಕ್ಕಿ ಜಿಲ್ಲಾ ವೈದ್ಯಕೀಯ ಅಧಿಕಾರಿ ರೇಖಾ ಅವರು ಕೃತಕ ಮೊಟ್ಟೆ ಲಭ್ಯತೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕೃತಕ ಮೊಟ್ಟೆ ಸಾಮಾನ್ಯ ಮೊಟ್ಟೆಗಿಂತ ಭಿನ್ನವಾಗಿರುತ್ತದೆ. ಕೃತಕ ಮೊಟ್ಟೆ ಕಂದು ಬಣ್ಣದಲ್ಲಿರುತ್ತದೆ. ಮೊಟ್ಟೆಯನ್ನು ಬೇಯಿಸಿದ ಬಳಿಕ ಅದನ್ನು ಕತ್ತರಿಸಿದರೂ ಕೆಡುವುದಿಲ್ಲ.
ಕೃಪೆ : ವಾಭಾ

Comments are closed.