ತುಮಕೂರು: ಖಾಸಗಿ ಕಾರಿನಲ್ಲಿ ತೆರಳುತ್ತಿದ್ದ ಮಧುಗಿರಿ ಡಿವೈಎಸ್ಪಿ ಕಾರು ಅಡ್ಡಗಟ್ಟಿದ ಪುಂಡ ಯುವಕರ ಗುಂಪು ದರೋಡೆಗೆ ಯತ್ನಿಸಿದ ಘಟನೆ ಪಾವಗಡದ ಹೊರವಲಯದಲ್ಲಿ ನಡೆದಿದೆ.
ಮಧುಗಿರಿ ಡಿವೈಎಸ್ಪಿ ಕಲ್ಲೇಶಪ್ಪ ಮಂಗಳವಾರ ರಾತ್ರಿ ಮಧುಗಿರಿಯಿಂದ ಪಾವಗಡಕ್ಕೆ ಖಾಸಗಿ ಕಾರಿನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರು ಅಡ್ಡಗಟ್ಟಿದ ಪಾನಮತ್ತ ಯುವಕರು ಮೊದಲು ಕಲ್ಲೇಶಪ್ಪನವರ ಚಾಲಕನಿಗೆ ಬಾಯಿಗೆ ಬಂದಂತೆ ಬಯ್ದಿದ್ದಾರೆ. ಆಗ ಕಲ್ಲೇಶಪ್ಪ ನಾನು ಡಿವೈಎಸ್ಪಿ ಎಂದು ಹೇಳಿದರೂ ಯುವಕರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಕಲ್ಲೇಶಪ್ಪ ಕಾರಿನಿಂದ ಇಳಿದವರೇ ಯುವಕರಿಗೆ ಹೊಡೆದು ಹಿಡಿಯಲು ಪ್ರಯತ್ನಿಸಿದ್ದಾರೆ.
ದರೋಡೆಗೆ ಯತ್ನಿಸಿದವರಲ್ಲಿ ದೀಪಕ್ ಮತ್ತು ಅವಿನಾಶ್ ಸ್ಥಳದಲ್ಲಿಯೇ ಸಿಕ್ಕಿಬಿದಿದ್ದಾರೆ. ಉಳಿದ ಯುವಕರಾದ ರಾಜು, ಲೋಕೇಶ್ ಮತ್ತು ಶಶಿ ಪರಾರಿಯಾಗಿದ್ದಾರೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.