ಕರ್ನಾಟಕ

ಬೆಳಗಾವಿಯಲ್ಲಿ ‘ಮರಿ ವೀರಪ್ಪನ್’ ಸೆರೆ

Pinterest LinkedIn Tumblr

veeraಬೆಳಗಾವಿ(ಅ. 11): ಇಲ್ಲಿಯ ಪೊಲೀಸರು ಮರಿ ವೀರಪ್ಪನ್’ನೊಬ್ಬನ್ನು ಸೆರೆಹಿಡಿದಿದ್ದಾರೆ. ಶೆಟ್ಟಿ ಗಲ್ಲಿಯ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಸಲೀಂ ಖಾನ್ ಸೌದಾಗರ್ ಎಂಬಾತನನ್ನು ಬಂಧಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಜಿಂಕೆ ಮತ್ತು ಸಾರಂಗದ ಕೊಂಬುಗಳು, ಪೆಂಗ್ವಿಲಿನ್ ಚಿಪ್ಪುಗಳು, ಆನೆದಂತ ಸೇರಿದಂತೆ ಅಪಾರ ಪ್ರಮಾಣದ ಪ್ರಾಣಿ ವಸ್ತುಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ. ಒಂದು ಅಂದಾಜಿನ ಪ್ರಕಾರ, ಈತನಿಂದ ವಶಪಡಿಸಿಕೊಂಡ ಈ ವಸ್ತುಗಳ ಮೌಲ್ಯ ನೂರು ಕೋಟಿಗೂ ಅಧಿಕವೆನ್ನಲಾಗಿದೆ. ಸಿಪಿಐ ಜಾವೀದ್ ಮುಶಾಪುರ, ಅಡಿವೇಶ ಗೂದಿಗೊಪ್ಪ ನೇತೃತ್ವದಲ್ಲಿ ಪೊಲೀಸ್ ತಂಡವು ಈತನನ್ನು ಹಿಡಿಯಲು ಯಶಸ್ವಿಯಾಗಿ ಬಲೆ ಬೀಸಿತ್ತು. ಸದ್ಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯಕ್ಕೆ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಬೆಳಗಾವಿಯಿಂದ ವಿಯೆಟ್ನಾಂ ಹಾಗೂ ಚೀನಾ ದೇಶಗಳಿಗೆ ಈ ವನ್ಯ ಜೀವಿ ವಸ್ತುಗಳನ್ನು ಸಾಗಾಟ ಮಾಡುವ ಜಾಲದಲ್ಲಿ ಸಲೀಂ ಖಾನ್ ಸೌದಾಗರ್ ಕಿಂಗ್ ಪಿನ್ ಎನ್ನಲಾಗಿದೆ.

Comments are closed.