ಕರ್ನಾಟಕ

ಮೂಡಿಗೆರೆಯಿಂದ ಪರಮೇಶ್ವರ್ ವಿಧಾನಸಭೆ ಚುನಾವಣೆ ಕಣಕ್ಕೆ

Pinterest LinkedIn Tumblr

parmeshwar kpccಬೆಂಗಳೂರು: ಕೊರಟಗೆರೆ ಕ್ಷೇತ್ರದ ಸೋಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‍ರನ್ನ ಕ್ಷೇತ್ರ ಬದಲಾಯಿಸೋ ಹಂತಕ್ಕೆ ತಲುಪಿಸಿದೆಯಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಇಂತಹದ್ದೊಂದು ಅನುಮಾನಕ್ಕೆ ಎಡೆ ಮಾಡಿಕೊಡೋ ಬೆಳಣಿಯೊಂದು ಕೈಪಾಳಯದಲ್ಲಿ ಆರಂಭವಾಗಿದೆ.

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರೋ ಪರಮೇಶ್ವರ್, ಮೂಡಿಗೆರೆ ಕ್ಷೇತ್ರದಿಂದ ಕಣಕ್ಕಿಳಿಯಲಿ ಅನ್ನೋ ಅಭಿಪ್ರಾಯವನ್ನ ಸ್ಥಳೀಯ ಮುಖಂಡರು ಕೆಪಿಸಿಸಿ ಕಾರ್ಯಾಧ್ಯಕ್ಷರ ಬಳಿ ಹೇಳಿಕೊಂಡಿದ್ದಾರೆ. ಈ ಹಿನ್ನೆಯಲ್ಲಿ ಪರಂ ನಡಿಗೆ ಮೂಡಿಗೆರೆ ಕಡೆಗೆ ಅನ್ನೋ ಮಾತು ಕೇಳಿ ಬರ್ತಿದೆ. ಉಸ್ತುವಾರಿ ಸಚಿವರಾದ ಬಳಿಕ ಪರಮೇಶ್ವರ್ ಕ್ಷೇತ್ರದಲ್ಲಿ ಒಳ್ಳೇ ಹೆಸರನ್ನ ಪಡೆದುಕೊಂಡಿದ್ದಾರೆ. ಹೀಗಾಗಿ ಅವರು ಈ ಕ್ಷೇತ್ರದಿಂದ ಕಣಕ್ಕಿಳಿದರೆ ಒಳ್ಳೆಯದು ಅನ್ನೋದು ಅಲ್ಲಿನವರ ವಾದ.

ಹಿಂದೆ ಈ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಕೆಲ ಮತಗಳ ಅಂತರದಿಂದ ಸೋತಿದ್ದ ಚಿತ್ರದುರ್ಗದ ಸಂಸದ ಚಂದ್ರಪ್ಪ ಕೂಡಾ ಪರಂ ಸಹಕಾರಕ್ಕೆ ನಿಂತಿದ್ದಾರೆ ಎನ್ನಲಾಗ್ತಿದೆ. ಈ ಎಲ್ಲಾ ಲೆಕ್ಕಚಾರಗಳ ಕಾರಣದಿಂದ ಪರಮೇಶ್ವರ್ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಅನ್ನೋ ಮಾತು ಕೇಳಿಬರ್ತಿದೆ. ಇವೆಲ್ಲದರ ನಡುವೆ ಬೆಂಗಳೂರಿನ ಪುಲಿಕೇಶಿನಗರ ಅಥವಾ ನೆಲಮಂಗಲ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಗೃಹಸಚಿವರೇ ಮುಂದಾಗಲಿದ್ದಾರೆ ಅನ್ನೋ ವಿಚಾರವೂ ಪರಮೇಶ್ವರ್ ಆಪ್ತ ವಲಯದಿಂದ ಕೇಳಿ ಬರ್ತಿದೆ.

ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರೋವಾಗಲೇ ಅಭ್ಯರ್ಥಿಗಳ ಕ್ಷೇತ್ರ ಆಯ್ಕೆ ಲೆಕ್ಕಾಚಾರಗಳು ಆರಂಭಗೊಂಡಿರೋದು ಕೈಪಾಳಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇವೆಲ್ಲದರ ನಡುವೆ ಪರಮೇಶ್ವರ್ ಚಿತ್ತ ಈ ಮೂರು ಕ್ಷೇತ್ರದಲ್ಲಿ ಯಾವುದರತ್ತ ಎನ್ನುವುದರ ಬಗ್ಗೆ ಪರಮೇಶ್ವರ್ ಅವರೇ ಉತ್ತರ ನೀಡಬೇಕಿದೆ.

Comments are closed.