ಕರ್ನಾಟಕ

ಮದ್ಯ ಮಾರಾಟದ ಆದಾಯ: ಮೊದಲ ಸ್ಥಾನದಲ್ಲಿ ತಮಿಳುನಾಡು, ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

Pinterest LinkedIn Tumblr

Liquor-Store-Alexandria-KY_0ಅಬಕಾರಿಯಿಂದಲೇ ರೂ.15,332 ಕೋಟಿ ಲಾಭ ಪಡೆಯುತ್ತಿದೆ. ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡನೇ ಸ್ಥಾನದಲ್ಲಿ ಹರ್ಯಾಣ ಮತ್ತು ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರಇವೆ.
ನವದೆಹಲಿ
ಬಿಹಾರದಲ್ಲಿ ಹೈಕೋರ್ಟ್‌ಗೆ ಸೆಡ್ಡು ಹೊಡೆದು ಮುಖ್ಯಮಂತ್ರಿ ನಿತೀಶ್‌ಕುಮಾರ್‌ ನೇತೃತ್ವದ ಸರ್ಕಾರ ಮತ್ತೆ ಪಾನ ನಿಷೇಧ ಜಾರಿಗೆ ತಂದಿದೆ. ಆದರೆ ಶುಕ್ರವಾರ ನಡೆದಿದ್ದ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್‌ ಪಟನಾ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಗಮನಾರ್ಹ ಬೆಳವಣಿಗೆಯೊಂದರಲ್ಲಿ ಅಬಕಾರಿಯಿಂದಲೇ ಹೆಚ್ಚಿನ ಆದಾಯ ಗಳಿಸುವ ಮೊದಲ ಹತ್ತು ರಾಜ್ಯಗಳ ಪಟ್ಟಿಯನ್ನು ‘ಇಂಡಿಯಾ ಟುಡೇ’ ಶನಿವಾರ ಪ್ರಕಟಿಸಿದೆ. ಅದರಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನವಿದೆ. ಅಬಕಾರಿಯಿಂದಲೇ ರೂ.15,332 ಕೋಟಿ ಲಾಭ ಪಡೆಯುತ್ತಿದೆ. ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡನೇ ಸ್ಥಾನದಲ್ಲಿ ಹರ್ಯಾಣ ಮತ್ತು ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರಇವೆ.
ಕೆಲವು ರಾಜ್ಯಗಳಲ್ಲಂತೂ ಶೇ. ಐದರಲ್ಲಿ ಒಂದು ಭಾಗದ ಆದಾಯಕ್ಕೆ ಅಬಕಾರಿ ಇಲಾಖೆಯನ್ನೇ ಅವಲಂಬಿಸಿದೆ. ಗುಜರಾತ್‌, ನಾಗಾಲ್ಯಾಂಡ್‌, ಮಿಜೋರಾಂ ಮತ್ತು ಮಣಿಪುರದಂತಹ ರಾಜ್ಯಗಳಲ್ಲಿ ಸರ್ಕಾರಗಳು ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿವೆ.
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ (ಒಸಿಇಡಿ) ನಡೆಸಿದ ಅಧ್ಯಯನದ ಪ್ರಕಾರ 1992 ರಿಂದ 2012ರ ನಡುವೆ ಪ್ರತಿ ತಲೆಗೆ ಮದ್ಯ ಸೇವನೆ ಪ್ರಮಾಣ ಶೇ.55ರಷ್ಟಾಗಿತ್ತು ಎಂದು ಗೊತ್ತಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನ ಪ್ರಕಾರ ದೇಶದಲ್ಲಿ ಶೇ.38ರಷ್ಟುಮದ್ಯ ಸೇವನೆ ಪ್ರಮಾಣ ಹೆಚ್ಚಾಗಿದೆ.
ರಾಜ್ಯ ಆದಾಯ (ಕೋಟಿ ರೂ. ಗಳಲ್ಲಿ)
1 ತಮಿಳುನಾಡು . 29,672
2 ಹರ್ಯಾಣ . 19,703
3 ಮಹಾರಾಷ್ಟ್ರ .18,000
4 ಕರ್ನಾಟಕ .15,332
5 ಉತ್ತರಪ್ರದೇಶ .14,083
6 ಆಂಧ್ರಪ್ರದೇಶ .12,739
7 ತೆಲಂಗಾಣ .12,144
8 ಮಧ್ಯಪ್ರದೇಶ . 7,926
9 ರಾಜಸ್ಥಾನ .5,585
10 ಪಂಜಾಬ್‌ . 5,000

Comments are closed.