ರಾಷ್ಟ್ರೀಯ

ತಡರಾತ್ರಿಯಲ್ಲಿ ಎಐಎಡಿಎಂಕೆಯಿಂದ ಸಚಿವರ ಸಭೆ

Pinterest LinkedIn Tumblr

aidmkಚೆನ್ನೈ(ಅ.09): ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿ ದಿನಗಳೇ ಕಳೆದಿದೆ. ಆದರೆ ಈವರೆಗೂ ಸಂಪೂರ್ಣವಾಗಿ ಅಮ್ಮ ಗುಣಮುಖರಾಗಿಲ್ಲ. ಇನ್ನೊಂದೆಡೆ ರಾಜ್ಯದ ಸಿಎಂ ಸ್ಥಾನ ಅಲಂಕರಿಸಿರುವ ಜಯಾ ಬಳಿ ಎಲ್ಲಾ ಪ್ರಮುಖ ಖಾತೆಗಳಿದೆ. ಅರಣ್ಯ, ಗೃಹ, ಪೊಲೀಸ್, ಸಾಮಾನ್ಯ ಆಡಳಿತ ಹಾಗೂ ಆಡಳಿತ ಸುಧಾರಣೆ ಹೀಗೆ ಎಲ್ಲವೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಪ್ರಮುಖ ಖಾತೆಗಳಿದೆ. ಇತ್ತ ಅಮ್ಮ ಆಸ್ಪತ್ರೆಯ ಪಾಲಾಗಿ 17 ದಿನಗಳೇ ಕಳೆದಿದ್ದು, ಯಾವಾಗ ಅವರು ಮನೆಗೆ ಮರುಳಿ ಮೊದಲಿನಂತೆ ಆಗ್ತಾರೋ ಎಂದು ಅವರ ಅಭಿಮಾನಿಗಳು ಮತ್ತು ಪಕ್ಷದ ಮುಖಂಡರು ಕಾಯುತ್ತಿದ್ದಾರೆ. ಆದ್ರೆ ಅಚ್ಚರಿ ಬೆಳವಣಿಗೆಯೆಂಬಂತೆ ನಿನ್ನೆ ತಡರಾತ್ರಿ ಎಐಎಡಿಎಂಕೆ ಪಕ್ಷವು ಸಚಿವರ ಸಭೆಯನ್ನು ಕರೆದಿತ್ತು. ಚೆನ್ನೈನ ಎಐಎಡಿಎಂಕೆ

ಕಚೇರಿಯಲ್ಲಿ ನಡೆದ ಸಭೆಗೆ ಎಲ್ಲ 32 ಸಚಿವರು ಆಗಮಿಸಿದ್ದು, ಓ.ಪನ್ನೀರ್ ಸೆಲ್ವಂ ಇದರ ನೇತೃತ್ವವನ್ನು ವಹಿಸಿಕೊಂಡಿದ್ದರು.
ಚೆನ್ನೈ(ಅ.09): ತಮಿಳುನಾಡಿನ ಸಿಎಂ ಆಸ್ಪತ್ರೆಗೆ ದಾಖಲಾಗಿ ದಿನಗಳೇ ಕಳೆಯುತ್ತಿದೆ. ಆದರೆ ಜಯಾ ಸಚಿವ ಸಂಪುಟದ ಮಂತ್ರಿಗಳು ಮಾತ್ರ ಅವರ ಮೇಲೆ ಯಾವುದೇ ಕಳಂಕ ಬರದಂತೆ, ಜನತೆಗೆ ಯಾವುದೇ ತಪ್ಪು ಸಂದೇಶ ಹೋಗದಂತೆ ಪಕ್ಷದ ವರ್ಚಿಸ್ಸಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ನಾನಾ ಕಸರತ್ತು ಮಾಡುತ್ತಿದ್ದಾರೆ.

ತಡರಾತ್ರಿಯಲ್ಲಿ ಸಚಿವರ ಸಭೆ ಕರೆದ ಎಐಎಡಿಎಂಕೆ: ಓ.ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ
ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿ ದಿನಗಳೇ ಕಳೆದಿದೆ. ಆದರೆ ಈವರೆಗೂ ಸಂಪೂರ್ಣವಾಗಿ ಅಮ್ಮ ಗುಣಮುಖರಾಗಿಲ್ಲ. ಇನ್ನೊಂದೆಡೆ ರಾಜ್ಯದ ಸಿಎಂ ಸ್ಥಾನ ಅಲಂಕರಿಸಿರುವ ಜಯಾ ಬಳಿ ಎಲ್ಲಾ ಪ್ರಮುಖ ಖಾತೆಗಳಿದೆ. ಅರಣ್ಯ, ಗೃಹ, ಪೊಲೀಸ್, ಸಾಮಾನ್ಯ ಆಡಳಿತ ಹಾಗೂ ಆಡಳಿತ ಸುಧಾರಣೆ ಹೀಗೆ ಎಲ್ಲವೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಪ್ರಮುಖ ಖಾತೆಗಳಿದೆ. ಇತ್ತ ಅಮ್ಮ ಆಸ್ಪತ್ರೆಯ ಪಾಲಾಗಿ 17 ದಿನಗಳೇ ಕಳೆದಿದ್ದು, ಯಾವಾಗ ಅವರು ಮನೆಗೆ ಮರುಳಿ ಮೊದಲಿನಂತೆ ಆಗ್ತಾರೋ ಎಂದು ಅವರ ಅಭಿಮಾನಿಗಳು ಮತ್ತು ಪಕ್ಷದ ಮುಖಂಡರು ಕಾಯುತ್ತಿದ್ದಾರೆ. ಆದ್ರೆ ಅಚ್ಚರಿ ಬೆಳವಣಿಗೆಯೆಂಬಂತೆ ನಿನ್ನೆ ತಡರಾತ್ರಿ ಎಐಎಡಿಎಂಕೆ ಪಕ್ಷವು ಸಚಿವರ ಸಭೆಯನ್ನು ಕರೆದಿತ್ತು. ಚೆನ್ನೈನ ಎಐಎಡಿಎಂಕೆ ಕಚೇರಿಯಲ್ಲಿ ನಡೆದ ಸಭೆಗೆ ಎಲ್ಲ 32 ಸಚಿವರು ಆಗಮಿಸಿದ್ದು, ಓ.ಪನ್ನೀರ್ ಸೆಲ್ವಂ ಇದರ ನೇತೃತ್ವವನ್ನು ವಹಿಸಿಕೊಂಡಿದ್ದರು.

ಸಚಿವರ ಸಭೆಯಲ್ಲಿ ನಡೆದಿದ್ದೇನು?
ಸಭೆಯ ಆರಂಭದಲ್ಲೇ ಎಡಪ್ಪಾಡಿ ಪಳನೀಸ್ವಾಮಿ, ಸಿಎಂ ಬಳಿಯಿರುವ ಖಾತೆಗಳನ್ನು ಹಂಚಿಕೆ ಮಾಡೋಣ ಎಂದರು. ಆದರೆ ಸಭೆಗೆ ಆಗಮಿಸಿದ್ದ, ಸಚಿವೆ ವಲರ್ಮತಿ ಮಾತ್ರ ಸಿಎಂ ಬಳಿಯಿರುವ ಖಾತೆಯನ್ನು ಈಗ ಹಂಚಿಕೆ ಮಾಡಿದರೆ ರಾಜ್ಯದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ. ಹೀಗಾಗಿ ಸಭೆಯಲ್ಲಿ ಸಿಎಂ ಬಳಿಯಿರುವ ಗೃಹ, ಪೊಲೀಸ್, ಸಾಮಾನ್ಯ ಆಡಳಿತ ಮತ್ತು ಸುಧಾರಣೆ ಹಾಗೂ ಅರಣ್ಯ ಇಲಾಖೆಗಳು ಜಯಲಲಿತಾ ಬಳಿಯಲ್ಲಿಯೇ ಇರುವುದು ಸೂಕ್ತ ಎಂಬ ತೀರ್ಮಾನಕ್ಕೆ ಎಲ್ಲರೂ ಬಂದಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ತಮಿಳುನಾಡಿನ ಸಿಎಂ ಬಳಿಯಿರುವ ಖಾತೆಗಳನ್ನು ಈಗ ಸದ್ಯಕ್ಕೆ ಹಂಚಿಕೆ ಮಾಡಿದ್ರೆ ಏನೇನು ಆಗುತ್ತೆ ಎಂದು ಲೆಕ್ಕಚಾರ ಹಾಕಿರುವ ಸಚಿವರು, ಸದ್ಯಕ್ಕೆ ಏನನ್ನೂ ಮಾಡುವುದು ಬೇಡ ಎಂಬ ಆಲೋಚನೆ ಬಂದಿದ್ದಾರೆ. ಮತ್ತೊಂದೆಡೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರಯುವ ಸಿಎಂ ಜಯಲಲಿತಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.

Comments are closed.