ಕರ್ನಾಟಕ

ನಾಡಹಬ್ಬ ದಸರಾ ಸಂಭ್ರಮಕ್ಕೆ ತಾಲೀಮು

Pinterest LinkedIn Tumblr

dasaraಮೈಸೂರು(ಅ.8): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಮನೆಮಾಡಿದೆ. ಜಂಬೂಸವಾರಿಗೆ ಕೇವಲ ಮೂರು ದಿನ ಬಾಕಿಯಿದ್ದು, ಅರಮನೆ ಆವರಣದಲ್ಲಿ ಜಂಬೂಸವಾರಿ ಪೂರ್ವ ಸಿದ್ದತೆ ಜೋರಾಗಿಯೇ ನಡೀತಿದೆ. ಅರ್ಜುನ ಹಾಗೂ ಅಶ್ವರೋಹಿ ಪಡೆ ತಾಲೀಮ್ ನಲ್ಲಿ ಭಾಗಿಯಾಗಿದೆ.

ಮತ್ತೊಂದೆಡೆ ದಸರಾ ಪ್ರಯುಕ್ತ ಅನೇಕ ಕಾರ್ಯಕ್ರಮಗಳಿಗೆ ಇವತ್ತು ಕೂಡ ಚಾಲನೆ ನೀಡಲಾಯಿತು. ಚಾಮುಂಡಿ ಬೆಟ್ಟದ ಹತ್ತುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳು, ಪುರುಷರು, ಮಹಿಳೆಯರು ಮತ್ತು ಹಿರಿಯ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

ರಂಗುಗೊಳಿಸಿದ ಯುವ ದಸರಾ
ಯುವ ದಸರಾದಲ್ಲಿ ಕಾಲೇಜು ವಿದ್ಯಾರ್ಥಿಗಳು ತಮ್ಮ ನೃತ್ಯದಿಂದ ಪ್ರದರ್ಶಿಸಿ ಇಡೀ ವೇದಿಕೆಯನ್ನು ಬೆರಗುಗೊಳಿಸುವುದ ಜೊತೆಗೆ ಇತಿಹಾಸವನ್ನು ನೆನಪಿಸಿದರು. ಕಂಸಾಳೆ ಕರ್ನಾಟಕ ಕಲೆಯಲ್ಲಿ ಬಹುಬೇಗ ಗಮನ ಸೆಳೆಯುವ ಕುಣಿತ. ಯುವ ದಸರಾದಲ್ಲಿ ಕಂಸಾಳೆ ಜೊತೆಗೆ ನಾಡು ನುಡಿ ಬೆಳೆಸುವ ಹಲವು ನೃತ್ಯಗಳು ನಡೆದವು. ಕನ್ನಡನಾಡು ಅಂದರೆ ಜನಪದಗಳ ಕಲೆಗಳ ನೆಲೆಬೀಡು. ಯುವ ದಸರಾದಲ್ಲಿ ಹತ್ತಾರು ಕಲಾವಿದರು ಜನಪದ ಹಾಡಿಗೆ ನೃತ್ಯ ಮಾಡಿದರು.

Comments are closed.