ಕರ್ನಾಟಕ

ಕಾವೇರಿ ವಿಷಯದಲ್ಲಿ ಬಿಜೆಪಿ ರಾಜಕೀಯ ಸಂಘರ್ಷ ಮಾಡುವುದಿಲ್ಲ: ಡಿವಿ

Pinterest LinkedIn Tumblr

SadanandaGowdaಬೆಳಗಾವಿ: ಕಾವೇರಿ ವಿಷಯದಲ್ಲಿ ರಾಜಕೀಯ ಸಂಘರ್ಷಕ್ಕೆ ಇಳಿಯುವುದಿಲ್ಲ. ಏನೇನು ಸಲಹೆ ಕೊಡಬೇಕೋ ಅದನ್ನೆಲ್ಲಾ ಕೊಟ್ಟಿದ್ದೇವೆ. ನಮ್ಮ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಬಿಜೆಪಿಗೆ ಪ್ರಾರಂಭಿಕ ದಿನಗಳಿಂದಲೇ ರಾಜ್ಯದ ಪರ ವಕೀಲರ ತಂಡದ ಮೇಲೆ ಸಂಶಯವಿತ್ತು. ನಮ್ಮ ಪಕ್ಷ ಕೊಟ್ಟ ಯಾವ ಸಲಹೆಯನ್ನು ಸರಕಾರ ಕೇಳಲೇ ಇಲ್ಲ. ಬಿಜೆಪಿ ತಾಳ್ಮೆಯಿಂದ ಈ ವಿಷಯದಲ್ಲಿ ವರ್ತಿಸಿತು. ನಮಗೆ ರಾಜಕೀಯ ಬೇಕಾಗಿಲ್ಲ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಕಾವೇರಿ ಮತ್ತಿತರ ವಿಷಯಗಳ ಬಗ್ಗೆ ಹೋರಾಡಿದ್ದೇವೆ ಎಂದರು.

ನಮ್ಮ ಪಕ್ಷದ ನಿಲುವು ಜನರಿಗೆ ಸ್ಪಷ್ಟವಾಗಿ ಈಗಾಗಲೇ ತಿಳಿದಿದೆ. 27.6 ಟಿಎಂಸಿ ನೀರು ಉಳಿಸಿಕೊಳ್ಳಬೇಕು ಎಂಬ ಸದನದ ನಿರ್ಧಾರಕ್ಕೆ ನಾವು ಬದ್ಧ. ರಾಜಕೀಯ ಸಂಘರ್ಷ ಬಿಜೆಪಿಗೆ ಬೇಕಿಲ್ಲ. ಕಾವೇರಿ ನೀರು ಹರಿ ಬಿಡುವ ಸನ್ನಿವೇಶ ಬರಲು ಆಡಳಿತಾರೂಢ ಕಾಂಗ್ರೆಸ್ ಕಾರಣ ಎಂದು ಸದಾನಂದಗೌಡ ಆರೋಪಿಸಿದರು.

ಕಾವೇರಿ, ಮಹದಾಯಿ ಬಗ್ಗೆ ನಿರ್ಣಯ
ಇಂದಿನ ಕಾರ್ಯಕಾರಿಣಿಯಲ್ಲಿ ಕಾವೇರಿ, ಮಹದಾಯಿ ಬಗ್ಗೆ ನಿರ್ಣಯ ಕೈಗೊಳ್ಳಲಾವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.

ನಿನ್ನೆ ನಡೆದ ಕಾರ್ಯಕಾರಣಿಯಲ್ಲಿ ಅನೇಕ ಮಹತ್ವದ ವಿಷಯ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಇಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹಾಜರಾಗಲಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ. ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ಚರ್ಚೆ ಆಗಲ್ಲ ಎಂದು ಹೇಳಿದರು.

Comments are closed.