ಕರ್ನಾಟಕ

ಪ್ರಧಾನಿ ಮೋದಿ ಭರವಸೆ ಹಿನ್ನೆಲೆ; ಉಪವಾಸ ಅಂತ್ಯಗೊಳಿಸಿದ ದೇವೇಗೌಡ

Pinterest LinkedIn Tumblr

deve

ಬೆಂಗಳೂರು: ತೀವ್ರ ಬಿಕ್ಕಟ್ಟಿಗೆ ಕಾರಣವಾಗಿರುವ ಕಾವೇರಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿರುವುದರಿಂದ ಜೆಡಿಎಸ್‌ ವರಿಷ್ಠ ದೇವೇಗೌಡರು ಶನಿವಾರ ಬೆಳಿಗ್ಗೆಯಿಂದ ಆರಂಭಿಸಿದ ಉಪವಾಸ ಸತ್ಯಾಗ್ರಹವನ್ನು ರಾತ್ರಿ ಕೊನೆಗೊಳಿಸಿದರು.

ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶನಿವಾರ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಹಾಗೂ ಅನಂತ ಕುಮಾರ್‌ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶ ಹೊತ್ತು ದೇವೇಗೌಡರನ್ನು ಭೇಟಿ ಮಾಡಿ ಉಪವಾಸ ನಿಲ್ಲಿಸುವಂತೆ ಮನವಿ ಮಾಡಿದರು. ಸಚಿವರ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಉಪವಾಸ ಅಂತ್ಯಗೊಳಿಸಿದರು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ದೇವೇಗೌಡರು ಮುಂದಿಟ್ಟಿರುವ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವ ಆಶ್ವಾಸನೆಯನ್ನು ಮೋದಿ ನೀಡಿದ್ದಾರೆ.

ಮೈಸೂರಿನಿಂದ ಮಧ್ಯಾಹ್ನ ವಿಧಾನಸೌಧಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ದೇವೇಗೌಡರ ಬಳಿಗೆ ತೆರಳಿ ಆರೋಗ್ಯ ವಿಚಾರಿಸಿದರು. ಅಲ್ಲದೆ, ಉಪವಾಸ ಕೈಬಿಡುವಂತೆ ಮನವಿಯನ್ನೂ ಮಾಡಿದರು.

ಸರ್ವಪಕ್ಷ ಸಭೆಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ಅದಕ್ಕೆ ದೇವೇಗೌಡ ಅವರು, ನನ್ನ ಹೋರಾಟ ಇಲ್ಲಿಯೇ ಮುಂದುವರಿಯುತ್ತದೆ. ರಾಜ್ಯಕ್ಕೆ ಒಳಿತಾಗುವ ತೀರ್ಮಾನ ಕೈಗೊಳ್ಳಿ ಎಂದು ಸಲಹೆ ನೀಡಿದರು. ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು.

ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಅವಕಾಶ ನೀಡಬಾರದು ಎಂಬ ಮೂರು ಬೇಡಿಕೆಗಳನ್ನು ದೇವೇಗೌಡರು ಕೇಂದ್ರದ ಮುಂದಿಟ್ಟಿದ್ದಾರೆ.

ಕೇಂದ್ರ ಸರ್ಕಾರದಿಂದ ಬಂದಿರುವ ಭರವಸೆಯಿಂದಾಗಿ ಉಪವಾಸ ನಿಲ್ಲಿಸಿದ್ದೇನೆ. ರಾಜ್ಯದ ಜನರಿಗೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಹೋರಾಟ ಮುಂದುವರಿಸುತ್ತೇನೆ ಎಂದು ಗೌಡರು ಹೇಳಿದ್ದಾರೆ.

ವಿಧಾನಸೌಧದ ಮುಂದಿರುವ ಗಾಂಧಿ ಪ್ರತಿಮೆ ಬಳಿ ಬೆಳಿಗ್ಗೆ 9 ಗಂಟೆಗೆ ಉಪವಾಸ ಆರಂಭಿಸಿದ ದೇವೇಗೌಡರ ಆರೋಗ್ಯದಲ್ಲಿ ಸಂಜೆ ವೇಳೆಗೆ ಏರುಪೇರು ಕಂಡುಬಂತು. ಆದರೂ ಅವರು ಉಪವಾಸ ಮುಂದುವರಿಸುವ ದೃಢ ಸಂಕಲ್ಪ ಮಾಡಿದ್ದರು. ಇದಾದ ಕೆಲಹೊತ್ತಿನಲ್ಲಿ ಕೇಂದ್ರ ಸರ್ಕಾರದಿಂದ ಅವರಿಗೆ ಸಂದೇಶ ರವಾನೆಯಾಯಿತು.

ಸಿಎಂ ಮನವೊಲಿಕೆ: ಮೈಸೂರಿನಿಂದ ಮಧ್ಯಾಹ್ನ ವಿಧಾನಸೌಧಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ದೇವೇಗೌಡರ ಬಳಿಗೆ ತೆರಳಿ ಆರೋಗ್ಯ ವಿಚಾರಿಸಿದರು. ಅಲ್ಲದೆ, ಉಪವಾಸ ಕೈಬಿಡುವಂತೆ ಮನವಿಯನ್ನೂ ಮಾಡಿದರು.

ಸರ್ವಪಕ್ಷ ಸಭೆಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ಅದಕ್ಕೆ ದೇವೇಗೌಡ ಅವರು, ‘ನನ್ನ ಹೋರಾಟ ಇಲ್ಲಿಯೇ ಮುಂದುವರಿಯುತ್ತದೆ. ರಾಜ್ಯಕ್ಕೆ ಒಳಿತಾಗುವ ತೀರ್ಮಾನ ಕೈಗೊಳ್ಳಿ’ ಎಂದು ಸಲಹೆ ನೀಡಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಗೃಹ ಸಚಿವ ಜಿ. ಪರಮೇಶ್ವರ್, ಸಚಿವರಾದ ಎಚ್‌.ಕೆ. ಪಾಟೀಲ, ಎಚ್‌.ಎಸ್‌. ಮಹಾದೇವ ಪ್ರಸಾದ್‌ ಅವರೂ ದೇವೇಗೌಡರ ಮನವೊಲಿಸುವ ಪ್ರಯತ್ನ ಮಾಡಿದರು.

ಜೆಡಿಎಸ್‌ನ ಬಂಡಾಯ ಶಾಸಕ ರಾದ ಚೆಲುವರಾಯಸ್ವಾಮಿ, ಜಮೀರ್‌ ಅಹಮದ್‌, ಕೆ. ಗೋಪಾಲಯ್ಯ ಅವರೂ ಗೌಡರ ಪ್ರತಿಭಟನೆಯಲ್ಲಿ ಭಾಗವಹಿಸಿ ದ್ದರು.

Comments are closed.