ಕರ್ನಾಟಕ

ಪಾಕ್ ನೊಂದಿಗೆ ನಾವು ಯುದ್ಧ ಬಯಸುವುದಿಲ್ಲ: ಕುಮಾರಸ್ವಾಮಿ

Pinterest LinkedIn Tumblr

hdkಬೆಂಗಳೂರು: ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ನಾವು ಯುದ್ಧ ಬಯಸುವುದಿಲ್ಲ. ಪಾಕಿಸ್ತಾನ ಸಹ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ರಕ್ಷಣೆಯ ಹಿತ ದೃಷ್ಠಿಯಿಂದ ಕೆಲವು ನಿರ್ಣಯಗಳನ್ನು ಕೈಗೊಂಡಿದೆ. ನಾವು ಯುದ್ಧ ಬಯಸುವುದಿಲ್ಲ. ಪಾಕಿಸ್ತಾನ ಸಹ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರಕಾರವು ಸಹ ಇಂತಹ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿನ್ನೆ ರಾತ್ರಿ ಭಾರತೀಯ ಯೋಧರು ಪಾಕಿಸ್ತಾನ ಒಳಗೆ ನುಗ್ಗಿ ಆರು ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಭಾರತದ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಠಿಯಾಗಿದೆ. ಈ ವೇಳೆ ಪಾಕಿಸ್ತಾನ ಸೇನೆಯ ಇಬ್ಬರು ಯೋಧರು ಸೇರಿದಂತೆ 38 ಉಗ್ರರನ್ನು ಹತ್ಯೆಗೈಯಲಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ.

ಸೀಮಿತ ಪ್ರದೇಶದಲ್ಲಿ ದಾಳಿ ನಡೆಯುವ ಮೂಲಕ ಭಯೋತ್ಪಾದಕನ್ನು ಸಾಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ನಡುಕ ಹುಟ್ಟಿಸಿತ್ತು.

Comments are closed.