ಕರ್ನಾಟಕ

ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕುಂಟಿಯಾ ನೇಮಕ

Pinterest LinkedIn Tumblr

dr-khunitaಬೆಂಗಳೂರು, ಸೆ.೨೮ – ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಸುಭಾಶ್ಚಂದ್ರ ಕುಂಟಿಯಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈಗಿನ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಈ ತಿಂಗಳ 30 ರಂದು ಸೇವೆಯಿಂದ ನಿವೃತ್ತರಾಗಲಿದ್ದು, ಅವರ ಜಾಗಕ್ಕೆ ಸುಭಾಶ್ಚಂದ್ರ ಕುಂಟಿಯಾ ಅವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.

1981ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಸುಭಾಶ್ಚಂದ್ರ ಕುಂಟಿಯಾ ಅವರು ಮೂಲತಃ ಒಲಿಸ್ಸಾ ರಾಜ್ಯದವರಾಗಿದ್ದು, ಅವರ ಸೇವಾವಧಿ 2017ರ ನವೆಂಬರ್‌ವರೆಗೂ ಮುಂದುವರೆಯಲಿದೆ.

ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಲು ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ತೀವ್ರ ಪೈಪೋಟಿ ನಡೆಸಿದರು. ಅವರ ಪರವಾಗಿ ಹಲವಾರು ಸಚಿವರು ಲಾಭಿ ಮಾಡಿದ್ದರೂ ಅದು ಫಲ ನೀಡಿಲ್ಲ.

ಕೇಂದ್ರ ಸರ್ಕಾರದ ಸೇವೆಯಲ್ಲಿದ್ದ ಕುಂಟಿಯಾ ಅವರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದರಿಂದ ಅವರ ನೇಮಕ ಆದೇಶ ಹೊರ ಬಿದ್ದಿದೆ.

ಇಂದು ಸಂಜೆ ಅಥವಾ ನಾಳೆ ಕುಂಟಿಯಾ ನೂತನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Comments are closed.