ಕರ್ನಾಟಕ

ಅಂಬರೀಷ್ ಎಲ್ಲಿ…? ಸರ್ವ ಪಕ್ಷ ಸಭೆಗೂ ಗೈರು…

Pinterest LinkedIn Tumblr

ambi

ಬೆಂಗಳೂರು: ಕಾವೇರಿ ನೀರಿಗಾಗಿ ಜನರು ಬೀದಿಗಿಳಿದಿದ್ದಾರೆ. ಸತತವಾಗಿ ಹೋರಾಟಗಳು ನಡೆಯುತ್ತಿವೆ. ಪದೇ ಪದೇ ಸುಪ್ರೀಂ ಕೋರ್ಟ್ ರಾಜ್ಯದ ವಿರುದ್ಧವಾಗಿಯೇ ತೀರ್ಪು ನೀಡುತ್ತಿದೆ. ಇಷ್ಟಾದರೂ ಮಂಡ್ಯ ಜನರ ಹೋರಾಟಕ್ಕೆ ಸಾಥ್ ನೀಡುವ ಕನಿಷ್ಠ ಪ್ರಯತ್ನ ಮಾಡದ ಮಾಜಿ ಸಚಿವ ಹಾಗೂ ನಟ ಅಂಬರೀಷ್ ಇಂದು ನಡೆದ ಸರ್ವ ಪಕ್ಷ ಸಭೆಗೂ ಗೈರಾಗಿದ್ದಾರೆ.

ತಮ್ಮನ್ನು ಸಂಪುಟದಿಂದ ತೆಗೆದು ಹಾಕಿದ ನಂತರ ಸಿಎಂ ಜೊತೆ ಮುನಿಸಿಕೊಂಡಂತಿರುವ ಅಂಬರೀಷ್ ಮಂಡ್ಯ ಜಿಲ್ಲೆಯ ರೈತರ ಕಷ್ಟಗಳಿಗಿಂತ ಸಿದ್ದರಾಮಯ್ಯ ಅವರ ವಿರುದ್ಧದ ಕೋಪವೇ ಹೆಚ್ಚಾಯಿತು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

ಅದೆಲ್ಲಾ ಇರಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕುರಿತು ಕರೆದಿರುವ ಸರ್ವಪಕ್ಷ ಸಭೆಯಿಂದಲೂ ದೂರ ಉಳಿದಿದ್ದಾರೆ. ಕಾವೇರಿಗೆ ಸಂಬಂಧಪಟ್ಟಂತೆ ಇಂದು ನಾಲ್ಕನೇ ಸರ್ವಪಕ್ಷ ಸಭೆ ನಡೆಯಿತು. ಈವೆರೆಗಿನ ನಾಲ್ಕೂ ಸಭೆಗಳಿಗೂ ಅಂಬರೀಷ್ ಗೈರಾಗಿದ್ದು, ತವರಿನ ಹಿತ ಕಾಯುವ ಪ್ರಯತ್ನದಿಂದ ದೂರ ಉಳಿದುಕೊಂಡಿದ್ದಾರೆ.

Comments are closed.