ಕರ್ನಾಟಕ

ಬೆಳಗಾವಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದವನ ಬಂಧನ

Pinterest LinkedIn Tumblr

ಬೆಳಗಾವಿ: ಬೆಳಗಾವಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ಧಾರೆ. ನಗರದ ಟಿಳಕವಾಡಿ ಅಪಾರ್ಟ್` ಮೆಂಟ್ನಲ್ಲಿ ನಡೆಯುತ್ತಿದ್ದ ಮಾಂಸದ ದಂಧೆ ಮೇಲೆ ದಾಳಿ ನಡೆದಿದೆ. ಮುಂಬೈ ಮೂಲದ ಯುವತಿಯೊಬ್ಬಳನ್ನು ರಕ್ಷಿಸಿ ಓರ್ವನನ್ನು ಬಂಧಿಸಲಾಗಿದೆ.

ಬಂಧಿತನನ್ನು ಮುಂಬೈ ಮೂಲದ ಪ್ರವೀಣ ಪಾಟೀಲ ಎಂದು ಗುರುತಿಸಲಾಗಿದೆ. ಈತ ಮುಂಬೈನಿಂದ ಯುವತಿಯರನ್ನು ಕರೆತಂದು ಬೆಳಗಾವಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ಹೇಳಲಾಗಿದೆ.

ಪ್ರವೀಣ ಪಾಟೀಲನ ಚಲನವಲನವನ್ನು ಕಳೆಹಾಕಿದ ಇಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Comments are closed.