
ಗುಳೇದಗುಡ್ಡ: ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಕೋಟೆಕಲ್ ಗ್ರಾ.ಪಂ.ನ ಕಂಪ್ಯೂಟರ್ ಆಪರೇಟರ್ ಒಬ್ಬರು ವಿಶೇಷ ತಹಶೀಲ್ದಾರ್ ಕಚೇರಿ ಪಾಸ್‌ವರ್ಡ್ ಹ್ಯಾಕ್ ಮಾಡಿ ತನ್ನ ಜಾತಿ ಪ್ರಮಾಣ ಪತ್ರ ಸೃಷ್ಟಿಸಿಕೊಂಡ ಪ್ರಕರಣ
ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಬ್ರ್ಯಾಂಚ್ ನಲ್ಲಿ ದೂರು ದಾಖಲಿಸಲಾಗಿದೆ.
ಗದಗಯ್ಯ ಮುಪ್ಪಯ್ಯ ಹುಚ್ಚೇಶ್ವರಮಠ ಎಂಬಾತನೇ ಹ್ಯಾಕ್ ಮಾಡಿರುವಾತ. ಈತ ನಿಯಮಗಳ ಪ್ರಕಾರ ಹಿಂದೂ ಲಿಂಗಾಯತ 3 ಬಿ ಪ್ರಮಾಣ ಪತ್ರ ಪಡೆಯಬಹುದು. ಆದರೆ ಈತ ವಿಶೇಷ ತಹಶೀಲ್ದಾರ್ ಕಚೇರಿಯ ವೆಬ್ ಸೈಟ್‌ನ್ನು ಹ್ಯಾಕ್ ಮಾಡಿ ತಾನು “ಬೇಡ ಜಂಗಮ (ಎಸ್ಸಿ)’ ಎಂದು ಸೆ.7ರಂದು ಪ್ರಮಾಣ ಪತ್ರ ಪಡೆದಿದ್ದಾನೆ.
ತಹಶೀಲ್ದಾರ್ ಸಹಿಯನ್ನು ನಕಲಿ ಮಾಡಿದ್ದಾನೆ. ಈ ಬಗ್ಗೆ ತಾನೇ ವಾಟ್ಸಾಪ್ ನಲ್ಲಿ ತನ್ನ ಜಾತಿ ಪ್ರಮಾಣ ಪತ್ರವನ್ನು
ಬೇರೆಯವರಿಗೆ ಕಳುಹಿಸಿದ್ದರಿಂದ ಇದು ಬೆಳಕಿಗೆ ಬಂದಿದೆ. ಈ ಬಗ್ಗೆ ತಹಶೀಲ್ದಾರ್ ರವಿಚಂದ್ರನ್ ಮಾತನಾಡಿ, ಹ್ಯಾಕ್
ಮಾಡಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವುದು ಸತ್ಯ ಎಂದಿದ್ದಾರೆ.
-ಉದಯವಾಣಿ
Comments are closed.