ಕರ್ನಾಟಕ

ಡಿಸೆಂಬರ್ ನಂತರ ಜನತೆಗೆ ಬಿಸ್ಲೆರಿ ಭಾಗ್ಯ: ಮಾಜಿ ಸಿಎಂ ಹೆಚ್ಡಿಕೆ ವ್ಯಂಗ್ಯ

Pinterest LinkedIn Tumblr

hdkಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದರೆ ಡಿಸೆಂಬರ್ ವೇಳೆಗೆ ನೀರು ಬರಿದಾಗಬಹುದು ಆ ನಂತರ ರಾಜ್ಯದ ಜನತೆಗೆ ಬಿಸ್ಲೆರಿ ಭಾಗ್ಯವನ್ನು ರಾಜ್ಯ ಸರ್ಕಾರ ಕೊಡಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಗಳು ರೈತರಿಗೆ ಸದ್ಯ 28 ಟಿಎಂಸಿ ನೀರು ಮಾತ್ರ ತಮಿಳುನಾಡಿಗೆ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಅಧಿಕಾರಿಗಳು ಈಗಾಗಲೇ 42 ಟಿಎಂಸಿ ನೀರು ಬಿಡಲಾಗಿದೆ ಎಂದು ಮಾಹಿತಿ ನೀಡುತ್ತಿದ್ದಾರೆ ಇದರಲ್ಲಿ ಯಾವುದು ನಿಜ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಜನಕ್ಕೆ ಕುಡಿಯಲು ನೀರಿಲ್ಲ. ಡಿಸೆಂಬರ್ ನಂತರ ರಾಜ್ಯ ಸರ್ಕಾರವೇ ಬಿಸ್ಲೆರಿ ಭಾಗ್ಯ ಕೊಡಲಿ. ಭಾಗ್ಯಗಳ ಸರ್ಕಾರ ಎಂದು ಕರೆಸಿಕೊಳ್ಳುತ್ತಿರುವ ಸರ್ಕಾರಕ್ಕೆ ಇರುವ ನೀರನ್ನು ತಮಿಳುನಾಡಿಗೆ ಬಿಟ್ಟ ಮೇಲೆ ಬಿಸ್ಲೆರಿ ಭಾಗ್ಯ ನೀಡುವುದೊಂದೆ ಸದ್ಯದ ದಾರಿ ಎಂದು ಸರ್ಕಾರದ ಕಾರ್ಯವೈಖರಿ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Comments are closed.