ಬೆಂಗಳೂರು: ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಟ್ವೀಟ್ ಒಂದು ವಿವಾದ ಸೃಷ್ಟಿಸಿದೆ.
‘ವ್ಯವಸಾಯ ಉದ್ದೇಶಕ್ಕಾಗಿ ನೀರು ಬಿಡಲಾಗಿದೆ. ರೈತರು ಜಮೀನುಗಳಲ್ಲಿದ್ದಾರೆ. ಇನ್ನು ಹೋರಾಟ ಏಕೆ?’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
‘@divyaspandana ಮನೆಯಲ್ಲಿ ಕುಳಿತು Tweet ಮಾಡುವುದನ್ನು ಬಿಟ್ಟು ಹೊರಗೆ ಬಂದು ತೋರಿಸು ನಿನ್ನ ಪೌರುಷ..@Jaggesh2’ ಎಂದು ಪ್ರವೀಣ್ ಕುಮಾರ್ ಎಸ್. ಎಂಬುವರು ಮಾಡಿರುವ ಟ್ವೀಟ್‌ಗೆ ರಮ್ಯಾ ಉತ್ತರಿಸಿದ್ದಾರೆ.
@paviks when water has been released to our farmers for irrigation purpose and the farmers are in the fields, what for?
— Divya Spandana/Ramya (@divyaspandana) September 9, 2016
ಇದಲ್ಲದೆ ನಾಲೆಗಳಿಂದ ನೀರು ಹರಿಯುತ್ತಿರುವ ಹಾಗೂ ಗದ್ದೆಗಳಲ್ಲಿ ನಾಟಿ ಕೆಲಸ ನಡೆಯುತ್ತಿರುವ ಚಿತ್ರಗಳನ್ನು ರಮ್ಯಾ ಟ್ವೀಟ್ ಮಾಡಿದ್ದಾರೆ.
Some more pictures from Mandya district today-water released from the dam reached the canals last night,sowing today pic.twitter.com/BEHBo57ztj
— Divya Spandana/Ramya (@divyaspandana) September 9, 2016
ಈ ಟ್ವೀಟ್‌ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಮನೆಯಲ್ಲಿ ಕುಳಿತು ಟ್ವೀಟ್ ಮಾಡುವ ಬದಲು ರೈತರೊಂದಿಗೆ ಹೋರಾಡ ಬನ್ನಿ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
Comments are closed.