ಕರ್ನಾಟಕ

ಇತಿಹಾಸ ಪರಿಚಯಕ್ಕೆ ಡಿಜಿಟಲ್ ಗ್ರಂಥಾಲಯ: ಉಮಾಶ್ರೀ

Pinterest LinkedIn Tumblr

pvec030514Umashree-450x400ಬೆಂಗಳೂರು, ಆ. ೨೬ – ವಿದ್ಯಾರ್ಥಿಗಳಿಗೆ ವರ್ತಮಾನದ ಜತೆಗೆ ಇತಿಹಾಸದ ಅರಿವು ಸಹ ಇರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ನುಡಿದರು.
ರಾಜ್ಯ ಪತ್ರಾಗಾರ ಇಲಾಖೆ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಮತ್ತು ಬ್ರಿಟಿಷ್ ಆಡಳಿತ ಕಾಲದ ದಾಖಲೆ ಪುಸ್ತಕಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸುವುದರ ಜತೆಗೆ ಇತಿಹಾಸ, ಸಂಶೋಧನೆಗೂ ಅಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ದೇಶ ಮತ್ತು ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಿಶ್ವಕ್ಕೆ ಪ್ರಚುರಪಡಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಂದಿನ ಆರು ತಿಂಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಪ್ರಾಂಶುಪಾಲರಾದ ಡಾ. ಶಾಂತಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ಲಂಡನ್‌ನ ಇಂಡಿಯನ್ ಆಫೀಸ್ ಲೈಬ್ರೆರಿಯಿಂದ ಬ್ರಿಟಿಷರ ಮೈಸೂರು ಆಡಳಿತಕ್ಕೆ ಸಂಬಂದಿಸಿದ ೭೨ ಆವೃತ್ತಿಗಳ ದಾಖಲೆಗಳನ್ನು ತರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಐತಿಹಾಸಿಕ ಮಹತ್ವ ಸಾರುವ ೫೦ ಪುಸ್ತಕಗಳನ್ನು ಸಹ ಇದೇ ಸಂದರ್ಭದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಮತ್ತು ನಾಳೆ ಪ್ರದರ್ಶನ ಇರುತ್ತದೆ.

Comments are closed.