ಕರ್ನಾಟಕ

ದೇಶದ್ರೋಹ ಕ್ಯಾನ್ಸರ್‌ನಂತೆ ಹರಡುವ ಮೊದಲು ಕಿತ್ತು ಹಾಕಬೇಕು: ಮುತಾಲಿಕ್

Pinterest LinkedIn Tumblr

mutalikಮೈಸೂರು: ದೇಶದ್ರೋಹ ಕ್ಯಾನ್ಸರ್ ಇದ್ದ ಹಾಗೆ, ಇದು ದೇಶವನ್ನು ಹರಡುವ ಮೊದಲು ಕಿತ್ತು ಹಾಕಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಮಿಲ್ಲರ್ಸ್ ರಸ್ತೆಯಲ್ಲಿರುವ ಥಿಯೋಲಾಜಿಕಲ್ ಕಾಲೇಜಿನಲ್ಲಿ ಆಗಸ್ಟ್ 13ರಂದು ಆಮ್ನೆಸ್ಟಿ ಇಂಡಿಯಾ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಚ್ ಖಂಡಿಸುತ್ತೇನೆ. ಪ್ರತಿಭಟನೆ ವೇಳೆ ಹೆಣ್ಣು ಮಕ್ಕಳು ಎಂಬುದನ್ನು ನೋಡದೆ ಲಾಠಿ ಚಾರ್ಚ್ ನಡೆಸಿದ್ದು ಸರಿಯಲ್ಲ. ಭಾರತೀಯ ಸೇನೆಯ ವಿರುದ್ಧ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಮೋದಿ ಹೇಳಿಕೆ ಖಂಡಿಸಿದ ಮುತಾಲಿಕ್

ನಕಲಿ ಗೋ ರಕ್ಷಕರ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಖಂಡಿಸಿದ ಅವರು, ದೇಶದಿಂದ 90 ಪ್ರತಿಶತ ಗೋ ಮಾಂಸ ರಫ್ತು ಆಗುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಎನ್‌ಜಿಓಗಳಿಗೆ ವಿದೇಶದಿಂದ ಬರುತ್ತಿದ್ದ ದೇಣಿಗೆ ಹಣ ನಿಂತಿದೆ. ಇದರಿಂದ ಎನ್‌ಜಿಓಗಳು ಮೋದಿ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

Comments are closed.