ಕರ್ನಾಟಕ

ಗದಗ್‍ನಲ್ಲಿ ನಿರ್ಮಾಣವಾಗುತ್ತಿದೆ 102 ಅಡಿ ಧ್ವಜ ಕಂಬ

Pinterest LinkedIn Tumblr

dwajaಗದಗ, ಆ.14-ಸ್ವಾತಂತ್ರ್ಯ ದಿನಾಚರಣೆಯ ಸಡಗರ-ಸಂಭ್ರಮದಲ್ಲಿರುವ ಗದಗ್ ಹಿರಿಮೆಗೆ ಈಗ ಮತ್ತೊಂದು ಗರಿ. ಅತ್ಯಂತ ಎತ್ತರದ ಧ್ವಂಜ ಕಂಬ ಮತ್ತು 24 ತಾಸು ಹಾರಾಡುವ ತ್ರಿವರ್ಣ ಧ್ವಜ ನಿರ್ಮಾಣವಾಗುತ್ತಿದ್ದು, ಅಂತಿಮ ಹಂತದ ಸ್ಪರ್ಶ ನೀಡಲಾಗುತ್ತಿದೆ.

ಇಷ್ಟು ಎತ್ತರದ ಧ್ವಜ ಕಂಬ ಹೊಂದಿರುವ ಉತ್ತರ ಕರ್ನಾಟಕದ ಮೊದಲ ಹಾಗೂ ರಾಜ್ಯದ ಎರಡನೇ ನಗರ ಎಂಬ ಕೀರ್ತಿಗೆ ಗದಗ್ ಪಾತ್ರವಾಗಿದೆ. ಗದಗ್ ನಗರದ ಕೈಗಾರಿಕಾ ಪ್ರದೇಶದ ಒಂದೂವರೆ ಎಕರೆ ಪ್ರದೇಶದಲ್ಲಿ ಸ್ವಾತಂತ್ರ್ಯೋತ್ಸವದ ಈ ಹೆಗ್ಗುರುತು ಸೃಷ್ಟಿಯಾಗುತ್ತಿದೆ.

ಈ ಪ್ರದೇಶ ಮತ್ತು ಇದರ ಉದ್ಯಾನವನದ ಸುತ್ತ ಹೊನಲು ಬೆಳಕಿನ ದೀಪಗಳು ದೇದೀಪ್ಯಮಾನವಾಗಿ ಕಂಗೊಳಿಸಲಿದೆ. ಇದು ಕೈಗಾರಿಕಾ ವಸಾಹತು ಪ್ರದೇಶ ಸಂಸ್ಥಾಪಕರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರ ಕನಸಿನ ಕೂಸು. ಇದು ನಗರದ ಹೆಮ್ಮೆಯ ಪ್ರತೀಕವಾಗಲಿದೆ ಎಂದು ಇದರ ಹೀಗಿನ ಅಧ್ಯಕ್ಷ ರಂಗಪ್ಪ ಓದುಗೌಡರ್ ಹೇಳಿದ್ದಾರೆ.

Comments are closed.