___ಮುಂಬೈ, ಆ.3: ಮುಂಬೈ-ಗೋವಾ ಹೆದ್ದಾರಿಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ಸಾವಿತ್ರಿ ನದಿಗೆ ಅಡ್ಡಲಾಗಿ ನಿರ್ಮಿಸಲ್ಪಟ್ಟ ಸೇತುವೆಯೊಂದು ಮಂಗಳವಾರ ತಡರಾತ್ರಿ ಕುಸಿದು ಬಿದ್ದ ಘಟನೆ ನಡೆದಿದೆ. ಈ ಘಟನೆಯಿಂದ ಸುಮಾರು 22 ಜನರು ನಾಪತ್ತೆಯಾಗಿದ್ದಾರೆಂದು ನಂಬಲಾಗಿದೆ.
ಮಹಾರಾಷ್ಟ್ರದ ರಾಯಿಗಢ ಜಿಲ್ಲೆಯಲ್ಲಿರುವ ಮಹಾಡ್ನಲ್ಲಿ ಹಳೆಯ ಸೇತುವೆಯೊಂದು ರಾತ್ರಿ 11:30ಕ್ಕೆ ಕುಸಿದು ಬಿದ್ದಿದೆ. ಮುಂಬೈನತ್ತ ತೆರಳುತ್ತಿದ್ದ ಎರಡು ಬಸ್ಗಳು, 12ಕ್ಕೂ ಅಧಿಕ ವಾಹನಗಳು ತುಂಬಿ ಹರಿಯುತ್ತಿರುವ ಸಾವಿತ್ರಿ ನದಿಗೆ ಬಿದ್ದಿರುವ ಶಂಕೆಯಿದೆ.
ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಪೊಲೀಸರು ದುರಂತ ಸ್ಥಳದತ್ತ ಧಾವಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡಗಳು ಹಾಗೂ ಇತರ 80 ಅಧಿಕಾರಿಗಳು ರಕ್ಷಣಾಕಾರ್ಯದಲ್ಲಿ ತೊಡಗಿವೆ. ಈತನಕ ಮನುಷ್ಯರಾಗಲಿ, ವಾಹನಗಳ ಕುರುಹೂ ಕೂಡ ಪತ್ತೆಯಾಗಿಲ್ಲ.
ರಾಯ್ಗಢ ಜಿಲ್ಲೆಯಲ್ಲಿ ಕಳೆದ ಕೆಲವು ಸಮಯದಿಂದ ಭಾರೀ ಮಳೆಯಾಗುತ್ತಿರುವ ಕಾರಣ ಸಾವಿತ್ರಿ ನದಿ ಮೈತುಂಬಿ ಹರಿಯುತ್ತಿತ್ತು.
Comments are closed.