ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆ ಮುಂದೆ ಟಾರ್ ಹಾಕಲು ಗೋವಿಂದರಾಜ ನಗರದ ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಆರೋಪಿಸಿದ್ದಾರೆ.
ವಿಜಯನಗರದ ಎಂ.ಸಿ.ಲೇಔಟ್‌ನ 16 ನೇಯ ಕ್ರಾಸ್‌ನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಮುಂದೆ ಟಾರ್ ಹಾಕಲು ಗೋವಿಂದರಾಜ ನಗರದ ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ ಅವರು ಒಂಬತ್ತು ತಿಂಗಳಿಂದ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಉಮೇಶ್ ಶೆಟ್ಟಿ ದೂರಿದ್ದಾರೆ.
ರಸ್ತೆಗೆ ಟಾರ್ ಹಾಕುವ ಕಾಮಗಾರಿಯನ್ನು ಪಾಲಿಕೆ ಕೆಆರ್‌ಡಿಎಲ್ ಸಂಸ್ಥೆಗೆ ನೀಡಿತ್ತು. ರಸ್ತೆಗೆ ಟಾರ್ ಹಾಕುವ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಸ್ಥಳೀಯ ಕಾರ್ಪೊರೇಟರ್ ಆರೋಪವನ್ನು ಶಾಸಕ ಪ್ರಿಯಾಕೃಷ್ಣ ಅವರು ನಿರಾಕರಿಸಿದ್ದಾರೆ.
Comments are closed.