ಕರ್ನಾಟಕ

ಗಣಪತಿ ಕೇಸ್; ಹೈಕೋರ್ಟ್ ನಲ್ಲಿ ಅರ್ಜಿ ವಾಪಸ್ ಪಡೆದ ಮೊಹಂತಿ, ಪ್ರಸಾದ್

Pinterest LinkedIn Tumblr

Pranab-Mohanty-Prasadಬೆಂಗಳೂರು: ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಜಿಲ್ಲಾ ಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ಹಾಗೂ ಪ್ರಕರಣದ ರದ್ದು ಕೋರಿ ನೀಡಬೇಕೆಂದು ಕೋರಿ ಹಿರಿಯ ಅಧಿಕಾರಿಗಳಾದ ಮೊಹಂತಿ ಮತ್ತು ಪ್ರಸಾದ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಿಂದ ವಾಪಸ್ ಪಡೆದಿದ್ದಾರೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹೈಕೋರ್ಟ್ ಪೀಠ ಗುರುವಾರ ಆದೇಶ ನೀಡಿದೆ.

ಉನ್ನತ ರಾಂಕ್ ನ ಅಧಿಕಾರಿಗಳ ಉಸ್ತುವಾರಿಯಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುವಂತೆ ಹೈಕೋರ್ಟ್ ನ ನ್ಯಾ.ಆನಂದ ಬೈರಾರೆಡ್ಡಿ ಅವರು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಧಿಕಾರಿಗಳಾದ ಮೊಹಂತಿ, ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗಣಪತಿ ಪುತ್ರ ಮಡಿಕೇರಿ ಜಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಜಾರ್ಜ್ ಸೇರಿದಂತೆ ಮೊಹಂತಿ, ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ಇಬ್ಬರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠ, ನೀವೂ ಯಾಕೆ ವಿಚಾರಣೆ ಎದುರಿಸಬಾರದು. ನಿಮಗೆ ಭಯವೇಕೆ ಎಂದು ಪ್ರಶ್ನಿಸಿತ್ತು.
-ಉದಯವಾಣಿ

Comments are closed.