ಕರ್ನಾಟಕ

ಮ್ಯಾಕ್ಡೊನಾಲ್ಡ್ ನಲ್ಲಿ ಬಾರ್ಬಿ ಡಾಲ್.

Pinterest LinkedIn Tumblr

mcdonld_barbi_girl

(mng)ಮಕ್ಕಳಿಗೆ ಬಾರ್ಬಿ ಡಾಲ್ ಅಂದ್ರೆ ಪ್ರೀತಿ. ಅವುಗಳ ಜೊತೆ ಆಟವಾಡ್ತಾ ಕಾಲ ಕಳೆಯುತ್ತಾರೆ ಮಕ್ಕಳು. ಆದ್ರೆ ಅಲ್ಲಿ ಮಕ್ಕಳ ಜೊತೆಯಲ್ಲ, ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡುತ್ತೆ ಒಂದು ಬಾರ್ಬಿ ಡಾಲ್. ಅದನ್ನು ಜನರು ಬರ್ಗರ್ ದೇವಿ ಎಂದೇ ಕರೆಯುತ್ತಾರೆ.

ತೈವಾನ್ ನ ಸು ವೇ-ಹಾನ್ ನೋಡಲು ಬಾರ್ಬಿ ಡಾಲ್ ನಂತೆ ಇದ್ದಾಳೆ. ಸುವೇ ಕಾವೋಹ್ಸುಂಗ್ ಸಿಟಿಯ ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡ್ತಿದ್ದಾಳೆ. ಆಕೆಯನ್ನು ನೋಡಿದ ಜನರು ಮೊದಲು ಆಶ್ಚರ್ಯಕ್ಕೊಳಗಾಗ್ತಾರೆ. ಈಕೆಯ ಕೈನಿಂದಲೇ ಬರ್ಗರ್ ಪಡೆಯಲು ಗ್ರಾಹಕರು ಇಷ್ಟಪಡ್ತಾರೆ. ಹಾಗಾಗಿ ಈಕೆ ಇರುವ ಕೌಂಟರ್ ನಲ್ಲಿ ದೊಡ್ಡ ಕ್ಯೂ ಇರುತ್ತೆ.

ಕೆಲವು ತಿಂಗಳುಗಳ ಹಿಂದೆ ಬ್ಲಾಗರ್ ಒಬ್ಬರು ಸುವೇ ನೋಡಿದ್ದಾರೆ. ಆಕೆಯ ಫೋಟೋ ತೆಗೆದು ಬ್ಲಾಗ್ ಗೆ ಅಪ್ ಲೋಡ್ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಸುವೇ ಫೋಟೋ ವೈರಲ್ ಆಗಿದೆ. ವೈ ವೈ ಹೆಸರಿನಲ್ಲಿ ಇನ್ಸ್ಟ್ರಾಗ್ರಾಮ್ ಹಾಗೂ ಫೇಸ್ಬುಕ್ ಅಕೌಂಟ್ ಕೂಡ ಇದೆ. ಇದನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.

Comments are closed.