ಕರ್ನಾಟಕ

ಸಾಹಿತಿಗಳ ಜತೆ ಉಪಹಾರದ ಜತೆ ಸಲ್ಲಾಪ ಕೃಷ್ಣಪರ್ವ

Pinterest LinkedIn Tumblr

26A4clrಬೆಂಗಳೂರು, ಜು. ೨೬- ಹಿರಿಯ ಸಾಹಿತಿಗಳ ಜೊತೆಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ. ಕೃಷ್ಣ ನಗರದ ಖಾಸಗಿ ಹೋಟೆಲ್‌ನಲ್ಲಿ ಸಾಹಿತಿಗಳೊಂದಿಗೆ ಉಪಹಾರ ಸೇವಿಸುವುದರೊಂದಿಗೆ ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು.

ನಗರದ ಖಾಸಗಿ ಹೋಟೆಲ್‌ಗೆ ಆಗಮಿಸಿದ್ದ ಅವರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ, ಪ್ರೊ. ಕೆ. ಮರುಳಸಿದ್ದಯ್ಯ, ನಾಗತಿಹಳ್ಳಿ ಚಂದ್ರಶೇಖರ್, ಗಾಯಕ ಮುದ್ದುಕೃಷ್ಣ, ಮುಖ್ಯಮಂತ್ರಿ ಚಂದ್ರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಶ್ರೀನಿವಾಸ್ ಜಿ. ಕಪ್ಪಣ್ಣ, ಎಂ.ಸಿ. ವೇಣುಗೋಪಾಲ್ ಮತ್ತಿತರರ ಜೊತೆ ಸಮಾಲೋಚನೆ ನಡೆಸಿದರು. ಎಲ್ಲರ ಜೊತೆ ಕೂತು ಉಪಹಾರ ಸೇವಿಸುತ್ತಾ ಎಸ್.ಎಂ.ಕೃಷ್ಣ ಮಾತುಕತೆ ನಡೆಸಿದರು.

ದೊರೆಸ್ವಾಮಿ ಜೊತೆ ವಿಶೇಷವಾಗಿ ಎಸ್.ಎಂ. ಕೃಷ್ಣ ಮಾತುಕತೆ ನಡೆಸಿದರು. ಬೆಂಗಳೂರಿನ ಭೂ ಅಕ್ರಮ ದಂಧೆ ಬಗ್ಗೆ ಸಮಗ್ರ ಮಾಹಿತಿಯನ್ನು ದೊರೆಸ್ವಾಮಿ ನೀಡಿದರು ಎಂದು ತಿಳಿದು ಬಂದಿದೆ.

ಪ್ರಸ್ತುತ ರಾಜ್ಯ ರಾಜಕಾರಣ, ರಾಜಕಾರಣದ ದುಃಸ್ಥಿತಿಗಳು, ಸಾಮಾಜಿಕ ಸಮಸ್ಯೆಗಳು, ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್ ಕಾಲದ ರಾಜಕೀಯ ನಡೆ, ಸದ್ಯ ಸಾರಿಗೆ ನೌಕರರ ಮುಷ್ಕರ ಹೀಗೆ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಬೆಂಗಳೂರಿನಲ್ಲಿರುವ ಕಲಾಮಂದಿರಗಳ ಬಗ್ಗೆ ಶ್ರೀನಿವಾಸ್ ಜಿ. ಕಪ್ಪಣ್ಣ ಅವರಿಂದ ಕೃಷ್ಣ ಮಾಹಿತಿ ಪಡೆದಕೊಂಡರು. ಕಲಾಮಂದಿರಗಳು ಮತ್ತು ಅವುಗಳ ದುಃಸ್ಥಿತಿ, ಪ್ರಗತಿ ಬಗ್ಗೆ ಕಪ್ಪಣ್ಣ ವಿವರಣೆ ನೀಡಿದರು.
ಎಸ್.ಎಂ. ಕೃಷ್ಣ ಅವರ ಈ ದಿಢೀರ್ ಸಮಾಲೋಚನಾ ಸಭೆಗಳು, ಸಾಹಿತಿಗಳು, ಚಿಂತಕರೊಂದಿಗಿನ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.

Comments are closed.