ಕರ್ನಾಟಕ

ಚಂದ್ರದ್ರೋಣ ಪರ್ವತದಲ್ಲಿ ಬಲು ಅಪರೂಪದ ಮೂಷಿಕ (ಬೆಟ್ಟದ ಸೊಂಡಿಲಿ) ಪತ್ತೆ

Pinterest LinkedIn Tumblr

harvest_rare_mouse

(mng)ಚಿಕ್ಕಮಗಳೂರ ಜು.26 : ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮೊದಲ ಬಾರಿಗೆ ಉದ್ದ ಮೂತಿಯ ಬೆಟ್ಟದ ಸೊಂಡಿಲಿ ಪತ್ತೆಯಾಗಿದೆ.

ಹುಳು-ಹುಪ್ಪಟೆ ತಿಂದು ಬದುಕುತ್ತದೆ ಎಂದು ಭಾವಿಸಲಾದ ಹಿಲ್ ಷ್ರೋ ಎಂದು ಆಂಗ್ಲಭಾಷೆಯಲ್ಲಿ ಕರೆಯುವ ಈ ಬೆಟ್ಟದ ಸೊಂಡಿಲಿ, ಈ ಬೆಟ್ಟಶ್ರೇಣಿಯಲ್ಲಿ ಅಧ್ಯಯನಕ್ಕೆ ತೆರಳಿದ್ದ ವೈಲ್ಡ್ಕ್ಯಾಟ್-ಸಿ ತಂಡಕ್ಕೆ ಗೋಚರಿಸಿದೆ.

ಈ ಅಪರೂಪದ ಮೂಷಿಕ ಕೇರಳದ ಎರಾವಿಕುಲಮ್, ಕೊಡಗಿನ ಭಾಗಮಂಡಲದಲ್ಲಿ 1850ರಲ್ಲಿ ಕಾಣಸಿಕ್ಕಿವೆ ಎಂದು ದಾಖಲಿಸಲಾಗಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಈ ಸೊಂಡಿಲಿಯ ಇರುವಿಕೆ ಮೊದಲ ಬಾರಿಗೆ ಗೋಚರಿಸಿದೆ ಎಂದು ಅಧ್ಯಯನ ತಂಡದಲ್ಲಿ ಭಾಗವಹಿಸಿದ್ದ ಸಾಗರ್, ಶರತ್, ಸೂರ್ಯ, ಮಧು ಹೇಳಿದ್ದಾರೆ.

ಅತ್ಯಂತ ಎತ್ತರವಾದ ಬೆಟ್ಟಸಾಲನ್ನು ಹೊಂದಿರುವ ಪಶ್ಚಿಮಘಟ್ಟಶ್ರೇಣಿಯಲ್ಲಿ ಈ ಇಲಿಗಳು ವಾಸಿಸುತ್ತವೆ ಎಂದು ದಾಖಲೆಗಳು ತಿಳಿಸುತ್ತವೆ. ಈ ಮೂಷಿಕದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅದನ್ನು ಕಂಡು ದಾಖಲಿಸಿರುವುದು ತೀರಾ ಅಪರೂಪ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ವೈಲ್ಡ್ಕ್ಯಾಟ್-ಸಿ ಸಂಸ್ಥೆ ಸಂಪರ್ಕಿಸುತ್ತಿದೆ ಎಂದು ತಿಳಿಸಿದ್ದಾರೆ.

Comments are closed.