ಮಂಗಳೂರು : ಒಂದೇ ಫ್ರೇಮಿನಲ್ಲಿ ಒಬ್ಬನೇ ವ್ಯಕ್ತಿ ಅಥವಾ ದೃಶ್ಯದ ಎರಡು ಅಥವಾ ಹೆಚ್ಚಿನ ಫೋಟೊಗಳನ್ನು ಸೆರೆಹಿಡಿಯುವ ಅಚ್ಚರಿಯನ್ನು ಕಾಣಲು ಈ ಆಯಪ್ ಡೌನ್ಲೋಡ್ ಮಾಡಿಕೊಳ್ಳಿ. ಮಲ್ಟಿ ಫೋಟೊಗಳನ್ನು ಸೆರೆಹಿಡಿಯುವ ಪ್ರಕ್ರಿಯೆ ಸರಳ ಹಾಗೂ ಸುಲಭವಾಗಿದೆ. ಒಂದೇ ಫ್ರೇಮಿನೊಳಗೆ ಎರಡು, ಮೂರು, ನಾಲ್ಕು ಹೀಗೆ ಆಪ್ಶನ್ಗಳನ್ನು ಬಳಸಿಕೊಂಡು ಫೋಟೊಗಳನ್ನು ಅಳವಡಿಸಿ ಸೆರೆ ಹಿಡಿಯಬಹುದು. ಆಯಪ್ನಲ್ಲಿ ನೀಡಲಾಗುವ ಸರಳ ಹಂತಗಳನ್ನು ಪಾಲಿಸಿದರೆ ಅಚ್ಚರಿಯ ಫೋಟೊಗಳು ಸಿದ್ಧವಾಗುತ್ತವೆ. ಇಂತಹ ಫೋಟೊಗಳನ್ನು ಸುಲಭವಾಗಿ ಸಾಮಾಜಿಕ ಜಾಲ ತಾಣಗಳಲ್ಲೂ ಹಂಚಿಕೊಳ್ಳಬಹುದು. ಸ್ಮಾರ್ಟ್ ಫೋಟೊ ಕಟ್ ಆಪ್ಶನ್ ಬಳಸಿ ಡುಪ್ಲಿಕೇಟ್ ಬ್ಯಾಕ್ಗ್ರೌಂಡ್ಗಳಿಗೆ ಫೋಟೊಗಳನ್ನು ಅಂಟಿಸಿ ಹೊಸ ರೂಪ ನೀಡಲೂ ಸಾಧ್ಯವಿದೆ. ವಿವಿಧ ಫೋಟೊ ಎಫೆಕ್ಟ್ಗಳು, ಫೋಟೊ ಫ್ರೆಂ, ಫ್ರೋಟೊ ಸ್ಟಿಕರ್, ಫೋಟೊ ಫಿಲ್ಟರ್ ಮತ್ತಿತರ ಆಯ್ಕೆಗಳಿವೆ.
ಕ್ಲೂ ಪೀರಿಯಡ್ ಟ್ರ್ಯಾಕರ್
ಮಹಿಳೆಯರಿಗೆ ಮುಟ್ಟಿನ ದಿನಗಳನ್ನು ಕರಾರುವಕ್ಕಾಗಿ ಕಂಡುಕೊಳ್ಳಲು ಸಹಕಾರಿ ಈ ಆಯಪ್. ಮುಖ್ಯವಾಗಿ ಉದ್ಯೋಗಸ್ಥ ಮಹಿಳೆಯರಿಗೆ ವ್ಯಸ್ತ ಬದುಕಿನಲ್ಲಿ ಮುಂದಿನ ಮುಟ್ಟಿನ ದಿನಗಳು ಯಾವುವು? ಮುಟ್ಟಿನ ಅಂತರದ ನಡುವೆ ಗರ್ಭಿಣಿಯಾಗುವ ಸಾಧ್ಯತೆಯಿರುವ ದಿನಗಳು, ನಿಮ್ಮ ಮೂಡ್ ಅವಲಂಬಿಸಿ ಮುಟ್ಟಿನ ದಿನಗಳ ಮೇಲೆ ಆಗುವ ಪರಿಣಾಮವನ್ನೂ ಕಂಡುಕೊಳ್ಳಲು ಈ ಆಯಪ್ ಸಹಾಯ ಮಾಡುತ್ತದೆ. ಪಿರಿಯಡ್ ಕ್ಯಾಲ್ಕ್ಯುಲೇಟರ್ ಸಹಾಯದಿಂದ ಮುಂದಿನ ಮುಟ್ಟಿನ ದಿನ ಲೆಕ್ಕ ಹಾಕುತ್ತದೆ, ಪಿರಿಯಡ್ ರಿಮೈಂಡರ್ ನೀಡುತ್ತದೆ, ನಿಯಮಿತ ಮುಟ್ಟಿನ ದಿನಗಳ ಆವರ್ತನೆಯನ್ನು ಲೆಕ್ಕ ಹಾಕುತ್ತದೆ. ಋತುಚಕ್ರದ ಕುರಿತು ವೈದ್ಯಕೀಯ ಹಾಗೂ ವೈಜ್ಞಾನಿಕ ಆಧಾರದಲ್ಲಿ ವಿವರ ಮಾಹಿತಿ ನೀಡುತ್ತದೆ. ಸೆಕ್ಸ್, ಪೈನ್, ಮೂಡ್ಸ್, ಜನನ ನಿಯಂತ್ರಣ ಗುಳಿಗೆಗಳು ಇತ್ಯಾದಿ ಅಂಶಗಳನ್ನೂ ಟ್ರಾಕ್ ಮಾಡಬಲ್ಲುದು. ನಿಮ್ಮ ಖಾಸಗಿತನ ರಕ್ಷಿಸಲು ಪಾಸ್ಕೋಡ್ ನೀಡಲಾಗುತ್ತದೆ, ಬ್ಯಾಕಪ್ ಆಪ್ಶನ್ ಇದೆ. ನಿಮ್ಮ ಈ ಹಿಂದಿನ ಋತುಚಕ್ರದ ಮಾಹಿತಿಯನ್ನೂ ನೆನಪಿಟ್ಟು ನೀಡುತ್ತದೆ.
ಕೇರಂ ತ್ರೀಡಿ
ನೈಜ ಕೇರಂ ಬೋರ್ಡಿನಲ್ಲಿ ಆಡಿದ ಅನುಭವವನ್ನು ನಿಮ್ಮ ಆಂಡ್ರಾಯ್ಡ್ ಫೋನ್ ಹಾಗೂ ಟ್ಯಾಬ್ಲೆಟ್ನಲ್ಲಿ ಹೊಂದಲು ಈ ಆಯಪ್ ಸಹಾಯ ಮಾಡುತ್ತದೆ. ಬಿಗಿನರ್, ಇಂಟರ್ ಮೀಡಿಯೇಟ್, ಎಕ್ಸ್ ಪರ್ಟ್ ಇತ್ಯಾದಿ ಹಂತಗಳನ್ನು ಆಯ್ದುಕೊಂಡು ಆಟೋಮೆಟಿಕ್ ಮೆಶಿನ್ ಜೊತೆ ನೀವು ಆಡಬಹುದು. ಅಥವಾ ನಿಮ್ಮದೇ ಫೋನ್ ಬಳಸಿ ಇನ್ನೊಬ್ಬ ವ್ಯಕ್ತಿಯೊಂದಿಗೂ ಆಡಬಹುದು. ಅಥವಾ, ವೈಫೈ, ಬ್ಲೂಟೂತ್ ಬಳಸಿ ಇನ್ನೊಂದು ಫೋನ್ನ ಬಳಕೆದಾರರೊಂದಿಗೂ ನೇರವಾಗಿ ಆಟವಾಡಿ ಕೇರಂ ಮಜಾ ಸವಿಯಬಹುದು. ವಿವಿಧ ಕಂಟ್ರೋಲ್ಗಳೊಂದಿಗೆ ಆಡಲು ತ್ವರಿತ ಹಾಗೂ ಸಮಗ್ರ ಟ್ಯೂಟೋರಿಯಲ್ ಮೋಡ್ ಆಯಪ್ನಲ್ಲಿ ಲಭ್ಯ. ನೈಜ ಕೇರಂ ಬೋರ್ಡ್ನಲ್ಲಿ ಆಡುವ ಥರವಾ ಯಾವುದೇ ರೀತಿಯ ಝಿಗ್ ಝಾಗ್ ಶಾಟ್ನ್ನು ತ್ರೀಡಿ ಕೇರಂ ಬೋರ್ಡ್ನಲ್ಲೂ ಆಡಬಹುದು.
(ರೀಡರ್ಸ್ ಚಾಯ್ಸ್ ಆಯಪ್ ಪರಿಚಯ ನೀಡಿದ್ದು ಕೊಡಗಿನ ಹುಲಿತಾಳದ ರವಿಕೃಷ್ಣ)
Comments are closed.