ಕರ್ನಾಟಕ

ಕೆಎಸ್‍ಆರ್‍ಪಿ ಪೇದೆ ಆತ್ಮಹತ್ಯೆ: ಎಸ್ಪಿ ಶಶಿಕುಮಾರ್ ಸ್ಪಷ್ಟನೆ

Pinterest LinkedIn Tumblr

police press

ಕಲಬುರಿಗಿ: ನಗರದ ಹೊರವಲಯದ ತಾಜಸುಲ್ತಾನಪುರ ಗ್ರಾಮ ಬಳಿಯ ಕೆಎಸ್‍ಆರ್‍ಪಿ ಪೇದೆ ತಮ್ಮ ವಸತಿ ಗೃಹದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಕೌಟುಂಬಿಕ ಹಿನ್ನಲೆಯಲ್ಲಿ ತಂದು ಡೆತ್‍ನೋಟ್‍ನಲ್ಲಿ ಬರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಶಶಿಕುಮಾರ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಭವನದಲ್ಲಿಂದು ಪತ್ರಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಪೇದೆ ಪದನ್ನೋತಿಯಿಂದಾಗಿ ಅವರನ್ನು ವಿಜಯಪುರಕ್ಕೆ ವರ್ಗಮಾಡಲಾಗಿತ್ತು. ಅವರು ಬರದಿಟ್ಟ ಡೆತ್‍ನೋಟ್‍ನಲ್ಲಿ ವರ್ಗಾವಣೆ ಹಾಗೂ ಅಧಿಕಾರಿಗಳ ಕಿರಿಕುಳ ಎಂದು ಎಲ್ಲಿಯೂ ನಮೂಧಿಸಿಲ್ಲ. ಕೌಟುಂಬಿಕ ಕಲಹದಿಂದಾಗಿ ಬೆಸತ್ತು ನೇಣಿಗೆ ಶರಣಾಗುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಅವರ ಕೈಬರವಣಿಗೆಯನ್ನು ಅವರ ಮಕ್ಕಳು ಗುರುತಿಸಿದ್ದಾರೆ ಎಂದು ಸ್ಪಷ್ಟ ಪಡಿಸಿದ ಅವರು ಇಲಾಖೆಯ ತೊಂದರೆಯಾಗಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಅಪರ ಎಸ್ಪಿ ಜಯಪ್ರಕಾಶ, ಕೆಎಸ್‍ಆರ್‍ಪಿ ಕಮಾಂಡೆಂಟ್ ಬಸವರಾಜ ಜಿಲ್ಲೆ ಹಾಗೂ ಇತರರು ಇದ್ದರು.

Comments are closed.