ಕರ್ನಾಟಕ

ಫ್ಯಾನಿಗೆ ನೇಣು ಹಾಕಿಕೊಂಡು ನವವಿವಾಹಿತೆ ಆತ್ಮಹತ್ಯೆ

Pinterest LinkedIn Tumblr

suಬೆಂಗಳೂರು: ನವವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ನಾಗರಬಾವಿಯ ಮಲ್ಲತ್ತ ಹಳ್ಳಿ ನಿವಾಸಿ ದೀಪಾ (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿವರಾದ ದೀಪಾ ಮತ್ತು ಲೋಕೇಶ್‌ಗೆ ಕಳೆದ ಮೂರು ತಿಂಗಳ ಹಿಂದೆ ವಿವಾಹವಾಗಿದೆ. ದೀಪಾ ವೈದ್ಯರೊಬ್ಬರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಇಲ್ಲಿಯೇ ಒಂದು ಕೊಠಡಿಯನ್ನು ದಂಪತಿಗೆ ನೀಡಲಾಗಿತ್ತು. ಪತಿ ಲೋಕೇಶ್‌ ಖಾಸಗಿ
ಕಂಪನಿಯೊಂದರಲ್ಲಿ ಸಹಾ ಯಕನಾಗಿದ್ದಾನೆ. ಕಳೆದ ಒಂದು ವಾರದ ಹಿಂದೆ ಲೋಕೇಶ್‌ ತಾಯಿ ಮಗನ ಮನೆಗೆ ಬಂದಿದ್ದರು.

ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ತಾಯಿಯನ್ನು ಊರಿನ ಬಸ್‌ ಹತ್ತಿಸಲು ಲೋಕೇಶ್‌ ಹೋಗಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ದೀಪಾ
ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯನ್ನು ಬಸ್‌ ಹತ್ತಿಸಿದ ಬಳಿಕ ಪತಿ ಕೆಲಸಕ್ಕೆ ಹೋಗಿದ್ದು, ಈ ವೇಳೆ ಪತ್ನಿಯ
ಮೊಬೈಲ್‌ಗೆ ಕರೆ ಮಾಡಿದ್ದಾನೆ. ದೀಪಾ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಲೋಕೇಶ್‌ ಅಲ್ಲಿಯೇ ಪಕ್ಕದಲ್ಲಿ ನೆಲೆಸಿರುವ ತನ್ನ
ಸಹೋದರಿಗೆ ಕರೆ ಮಾಡಿ ಪತಿ ಕರೆ ಸ್ವೀಕರಿಸದ ಬಗ್ಗೆ ಹೇಳಿದ್ದಾನೆ. ಬೆಳಗ್ಗೆ 9ನ ಗಂಟೆ ಸುಮಾರಿಗೆ ಮನೆ ಬಳಿ ಹೋಗಿ ನೋಡಿದಾಗ ಒಳಗಿನಿಂದ
ಲಾಕ್‌ ಆಗಿತ್ತು. ಎಷ್ಟು ಬಾರಿ ಕೂಗಿದರೂ ದೀಪಾ ಬಾಗಿಲು ತೆರೆದಿಲ್ಲ. ಆತಂಕದಿಂದ ಮನೆ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

ಪತಿ ಲೋಕೇಶ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು. ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಉದಯವಾಣಿ

Comments are closed.