ಟೆನ್ನಿಸ್ ಲೋಕದ ತಾರೆ ಸಾನಿಯಾ ಮಿರ್ಜಾಳ ಕುರಿತಂತೆ ಒಂದು ಸಿನಿಮಾ ಮಾಡಿದರೆ ಅದು ಇತರ ಅನೇಕರಿಗೆ ಸ್ಫೂರ್ತಿಯಾದೀತೆಂಬುದು ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್‍ಖಾನ್ ಅಭಿಮತ. ಹಾಗಾಗಿ ಸಾನಿಯಾಳ ಅಂತಹ ಬಹೋಪಿಕ್ ಚಿತ್ರ ನಿರ್ಮಿಸಲು ಸದ್ಯ ಶಾರುಕ್‍ಖಾನ್ ಸಿದ್ಧವಿದ್ದಾನಂತೆ.
ಇಂದಲ್ಲವಾದರೆ ಇನ್ನೆಂದಾದರಾಗಲಿ ಸಾನಿಯಾಳನ್ನು ಕುರಿತಂತೆ ಸಿನಿಮಾ ಮಾಡಿದರೆ ಖಂಡಿತಾ ಅದೊಂದು ಸ್ಫೂರ್ತಿದಾಯಕವಾಗಿರುತ್ತದೆ. ಮಾತ್ರವಲ್ಲ, ಅದು ಫೆಂಟಾಸ್ಟಿಕ್ ಆಗಿ ಮೂಡಿ ಬರುತ್ತದೆ ಎಂದು ಶಾರುಕ್ ಮಾಧ್ಯಮದೆದುರು ಹೇಳಿದ್ದಾನಂತೆ.
ಮೂಗುತಿ ಸುಂದರಿ ಸಾನಿಮಾ ಮಿರ್ಜಾಳ ಜೀವನ ಚರಿತ್ರೆ (ಆಟೊ ಬಯಾಗ್ರಫಿ) ಏಸ್ ಎಗೈನ್ಸ್ಟ್ ಓಡ್ಸ್ ಕೃತಿಯನ್ನು ಹೈದರಾಬಾದ್‍ನಲ್ಲಿ ಬಿಡುಗಡೆ ಮಾಡಿದ ಶಾರುಕ್ಖಾನ್, ಸಾನಿಯಾ ಸಾಧನೆ ಮತ್ತು ಛಲಗಳ ಬಗ್ಗೆ ಪ್ರಶಂಸಿಸಿದ್ದಾರೆ.ಸಾನಿಯಾ ಅಭಿಪ್ರಾಯ ಏನಿದೆಯೋ ನನಗೆ ತಿಳಿಯದು.
ಒಂದು ವೇಳೆ ಟೆನಿಸ್ ತಾರೆ ಅವಕಾಶ ನೀಡಿದರೆ ಖಂಡಿತಾ ನಾನು ಆ ಚಿತ್ರದ ನಿರ್ಮಾಪಕನಾಗಲು ಉತ್ಸುಕನಾಗಿದ್ದೇವೆ ಎಂದು ಶಾರುಕ್ ತಿಳಿಸಿದ್ದಾರೆ.ಭಾರತೀಯ ಕ್ರೀಡಾ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿವೆ ಎಂಬ ಆಶಾ ಭಾವನೆ ಅವರು ವ್ಯಕ್ತ ಪಡಿಸಿ ದರು.
Comments are closed.