ನವದೆಹಲಿ ಜು.13: ಸಾಮಾಜಿಕ ಜಾಲತಾಣಗಳ ಮೆಸೆಜಿಂಗ್ ಸೇವೆಯಲ್ಲಿ ಮುಂಚುಣಿಯಲ್ಲಿರುವ ಸೋಷಿಯಲ್ ಮಿಡಿಯಾದ ದೊಡ್ಡಣ್ಣ ಫೇಸ್’ಬುಕ್ ಮಾಲೀಕತ್ವದ ವಾಟ್ಸಾಪ್ ಮೆಸೆಂಜರ್ ಆಪ್’ನ್ನು ಇನ್ಮುಂದೆ ಕೆಲವು ಮಾದರಿಯ ಪೋನ್’ಗಳಲ್ಲಿ ಬಳಸಲು ಸಾಧ್ಯವಿಲ್ಲ.
ಸಿಂಬಿಯಾನ್ ಓಎಸ್ (Symbian OS) ಬಳಕೆಯಲ್ಲಿರುವಂತಹ ಫೋನ್’ನಲ್ಲಿ ಕೆಲವೇ ದಿನಗಳಲ್ಲಿ ವಾಟ್ಸಾಪ್ ಬಳಕೆ ಕೊನೆಯಾಗಲಿದೆ. 2017ರಿಂದ ಸಿಂಬಿಯಾನ್ ಓಎಸ್ ಸೇವೆಯು ಲಭ್ಯವಿಲ್ಲದ ಕಾರಣ ಈ ತೊಂದರೆ ನಿರ್ಮಾಣವಾಗಿದೆ ಎನ್ನಲಾಗಿದೆ.
31/12/2016 ರಿಂದ ಸಿಂಬಿಯಾನ್ ಓಎಸ್ (Symbian OS) ಇರುವಂತಹ ಫೋನ್ ಬಳಕೆದಾರು ವಾಟ್ಸಾಪ್ ಬಳಸಲು ಸಾಧ್ಯವಿಲ್ಲ ಎಂದು ಈಗಾಗಲೇ ಕಂಪನಿ ತನ್ನ ಬಳಕೆದಾರರಿಗೆ ತಿಳಿಸಿದೆ.
ಒಮ್ಮೆ ಸಿಂಬಿಯಾನ್ ಓಎಸ್ ಸೇವೆ ಮುಂದುವರೆದಲ್ಲಿ ಚಿಂತೆಯಿಲ್ಲದೆ ವಾಟ್ಸಾಪ್ ಬಳಸಬಹುದು ಇಲ್ಲವೇ ಮುಂದಿನ ವರ್ಷ ಹೊಸ ಸ್ಮಾರ್ಟ್ ಪೋನ್’ಕೊಳ್ಳಲು ಈಗಲೇ ಪ್ಲಾನ್ ಮಾಡುವುದು ಸೂಕ್ತ.

Comments are closed.