ಕರ್ನಾಟಕ

ಕೋಳಿವಾಡ ವಿಧಾನಸಭೆ ಸ್ಪೀಕರ್‌

Pinterest LinkedIn Tumblr

fffffಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಶಾಸಕ, ರಾಣೆಬೆನ್ನೂರಿನ ಕೆ.ಬಿ. ಕೋಳಿವಾಡ ಅವರು ವಿಧಾನಸಭಾಧ್ಯಕ್ಷರಾಗಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

‘ವಿಧಾನಸಭಾಧ್ಯಕ್ಷರ ಹುದ್ದೆಯನ್ನು ವಹಿಸಿಕೊಳ್ಳಲು ಸಿದ್ಧನಿದ್ದೇನೆ’ ಎಂಬ ಒಪ್ಪಿಗೆ ಪತ್ರವನ್ನು ಕೋಳಿವಾಡ ಅವರು ವಿಧಾನಸಭೆ ಕಾರ್ಯದರ್ಶಿ ಅವರಿಗೆ ಸೋಮವಾರ ಹಸ್ತಾಂತರಿಸಿದ್ದರು.

ಒಂದೇ ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಕೋಳಿವಾಡ ಅವರು ಅವಿರೋಧವಾಗಿ ಆಯ್ಕೆಯಾದರು. ಅಧಿಕೃತವಾಗಿ ಕೋಳಿವಾಡ ಅವರ ಹೆಸರನ್ನು ಘೋಷಣೆ ಮಾಡಿದ ಬಳಿಕ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಅವರನ್ನು ಸಭಾಧ್ಯಕ್ಷರ ಪೀಠಕ್ಕೆ ಕರೆದೊಯ್ದು ಕೂರಿಸಿ ಅಭಿನಂದಿಸಿದರು.

ನೂತನ ಸ್ಪೀಕರ್‌ ಕೋಳಿವಾಡ ಅವರಿಗೆ ಸಚಿವರು ಮತ್ತು ಶಾಸಕರುಗಳು ಶುಭಾಶಯ ಕೋರಿದರು.

Comments are closed.