ಬೆಂಗಳೂರು: ನ್ಯಾಷನಲ್ ಮಾರ್ಕೆಟ್ ನಲ್ಲಿ ಕಂಠಪೂರ್ತಿ ಕುಡಿದು ಬಂದಿದ್ದ ನೈಜೀರಿಯನ್ ಮಹಿಳೆ ಮೊಬೈಲ್ ಖರೀದಿಸುವ ವೇಳೆ ಅಂಗಡಿ ಮಾಲೀಕನ ಜೊತೆ ಜಗಳಕ್ಕಿಳಿದು ಗಲಾಟೆ ನಡೆಸಿದ್ದರು. ಉಪ್ಪಾರಪೇಟೆ ಪೊಲೀಸ್ ಠಾಣೆ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮೇಲೂ ಹಲ್ಲೆ ನಡೆಸಲು ಮಹಿಳೆ ಮುಂದಾಗಿದ್ದಳು. ಬಳಿಕ ಆಕೆಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ದಾಂಧಲೆ ನಡೆಸುವ ಮೂಲಕ ರಾಜಧಾನಿಯಲ್ಲಿ ಮತ್ತೆ ನೈಜೀರಿಯನ್ ಪ್ರಜೆಗಳ ಪುಂಡಾಟಿಕೆ ಮುಂದುವರಿದ ಘಟನೆ ಸೋಮವಾರ ನಡೆದಿದೆ.
ಆಸ್ಪತ್ರೆಯಲ್ಲಿ ಜನರ ಮೇಲೆ ಹಲ್ಲೆ ನಡೆಸಲು ನೈಜೀರಿಯನ್ ಮಹಿಳೆ ಮುಂದಾಗಿದ್ದಳು. ಆಕೆಯ ರಂಪಾಟ ಕಂಡು ಸಾರ್ವಜನಿಕರು ದಂಗಾಗಿ ಹೋಗಿದ್ದರು. ಜನರು ದಿಕ್ಕಾಪಾಲಾಗಿ ಓಡಿಹೋಗಿದ್ದರು. ಬಟ್ಟೆಯನ್ನೆಲ್ಲಾ ಹರಿದುಕೊಂಡು ರಸ್ತೆಯಲ್ಲೇ ಉರುಳಾಡಿದ್ದಳು. ಹಾರಾಟ, ಚೀರಾಟ ನಡೆಸಿದ್ದ ನೈಜೀರಿಯನ್ ಮಹಿಳೆಯ ಮೇಲೆ ಬಲೆಯಂತಹ ಬಟ್ಟೆಯನ್ನು ಎಸೆದು ಸೆರೆ ಹಿಡಿದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇತ್ತೀಚೆಗೆ ವಿಲ್ಸನ್ ಗಾರ್ಡನ್ ಬಳಿ ಬಿಎಂಟಿಸಿ ಕಂಡಕ್ಟರ್ ಮೇಲೆ ನಾಲ್ವರು ನೈಜಿರಿಯನ್ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಭಾನುವಾರ ನಡೆದಿತ್ತು. ಅಲ್ಲದೇ ಕಂಠಪೂರ್ತಿ ಕುಡಿದಿದ್ದ ಆಫ್ರಿಕನ್ ವಿದ್ಯಾರ್ಥಿ ಹೆಣ್ಣೂರು ರಸ್ತೆಯಲ್ಲಿ ಪಾದಚಾರಿಗಳಿಗೆ ಬೈಕ್ನಿಂದ ಡಿಕ್ಕಿ ಹೊಡೆದುಗಲಾಟೆ ಮಾಡಿಕೊಂಡ ಘಟನೆ ರಾಷ್ಟ್ರಮಟ್ಟದ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿತ್ತು.
-ಉದಯವಾಣಿ
Comments are closed.