ಬೆಂಗಳೂರು, ಜೂ. ೨೩- ನಗರದಲ್ಲಿ ನಿನ್ನೆ ರಾತ್ರಿಯಿಂದ ಇಂದು ಬೆಳಿಗಿನವರೆಗೂ ಸುರಿದ ಮಳೆಗೆ 5ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಸುಮಾರು 8.30ರಿಂದ ಆರಂಭವಾದ ಮಳೆ ಕೆಲವೊಮ್ಮೆ ಜೋರಾಗಿ ಮಗದೊಮ್ಮೆ ತುಂತುರು ಮಳೆಯಾಗಿ ಸುರಿದಿದೆ. ಇಂದು ಬೆಳಿಗ್ಗೆ 9.30ರವರೆಗೂ ಜಡಿ ಮಳೆ ಕಾಣಿಸಿಕೊಂಡಿತು. ಆರ್ಟಿ ನಗರದಲ್ಲಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನಿವಾಸದ ಬಳಿಯೂ ಮರವೊಂದು ಉರುಳಿ ಬಿದ್ದಿದೆ. ವಿಜಯನಗರ, ಮಾರುತಿ ಮಂದಿರ, ಇಟ್ಟ ಮಡುಗು, ಬಿಗ್ಬಜಾರ್ ಸಮೀಪ ಉರುಳಿಬಿದ್ದ 2 ಮರಗಳನ್ನು ಬಿಬಿಎಂಪಿ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಚರಂಡಿಯಲ್ಲಿ ಹೂಳು ತುಂಬಿದ್ದರ ಪರಿಣಾಮ ಮಳೆ ನೀರು ಹೊರಬಂದು ಬಿಳೇಕನಹಳ್ಳಿ ಮನಯೊಂದಕ್ಕೆ ನೀರು ನುಗ್ಗಿ ಕುಟುಂಬದ ಸದಸ್ಯರು ನೀರು ಹೊರ ಹಾಕಲು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಕೋರಮಂಗಲ, ಜೆಪಿ ನಗರ ಮತ್ತಿತರ ಕಡೆಯೂ ಮರಗಳು ಬಿದ್ದಿದ್ದರೂ ಯಾವುದೇ ಅನಾಹುತ ಸಂಭವಿಸಿಲ್ಲ.
ನಗರದಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ತುಂತುರು ಮಳೆ ಬಂದಿದ್ದರಿಂದ ಹೇಳಿಕೊಳ್ಳುವಂತಹ ಅನಾಹುತಗಳು ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆಯೂ ಜಡಿ ಮಳೆ ಬಂದಿದ್ದರಿಂದ ಉದ್ಯೋಗಕ್ಕೆ ಹೊರಡುವವರು ಕೊಡೆ, ಜರ್ಕಿನ್ಗಳನ್ನು ಆಶ್ರಯಿಸಬೇಕಾಯಿತು. ಸಂಜೆಯೂ ಮಳೆ ಬರಬಹುದು ಎಂಬ ಭೀತಿಯಿಂದ ಬಹುತೇಕ ಉದ್ಯೋಗಿಗಳು ಕಾರುಗಳನ್ನು ಹೊರ ತೆಗೆದಿದ್ದರಿಂದ ನಾಗರಬಾವಿ, ಮೈಸೂರು ರಸ್ತೆ, ಕೋರಮಂಗಲ, ಆಡುಗೋಡಿ, ಬನ್ನೇರುಘಟ್ಟ, ಮಲ್ಲೇಶ್ವರಂ ಮತ್ತಿತರ ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು
ಕರ್ನಾಟಕ
Comments are closed.