ಬೆಂಗಳೂರು:ಭಿಕ್ಷೆ ಬೇಡಲಿಲ್ಲ ಎಂದು ಇಬ್ಬರು ಮಕ್ಕಳ ಮುಖಕ್ಕೆ ಮಲತಂದೆ ಸುಮಾರು 50ಕ್ಕೂ ಹೆಚ್ಚು ಬಾರಿ ಸಿಗರೇಟ್ ನಿಂದ ಸುಟ್ಟಿರುವ ಘಟನೆ ಮುನೇಶ್ವರ್ ಬ್ಲಾಕ್ ನ ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದೆ. ಇದೀಗ ಮಲತಂದೆ ಹಾಗೂ ತಾಯಿ ಪೊಲೀಸರ ಅತಿಥಿಯಾಗಿದ್ದಾರೆ.
ಭಿಕ್ಷೆ ಬೇಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಕ್ಕಳ ಮುಖ, ಕೈ, ಕಾಲುಗಳಿಗೆ ಮಲತಂದೆ ದೇವರಾಜ್ ಸಿಗರೇಟ್ ನಿಂದ ಸುಡುತ್ತಿದ್ದ. ಈ ಅಮಾನವೀಯ ಘಟನೆಯನ್ನು ಕಂಡ ಸ್ಥಳೀಯರು ದೇವರಾಜ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಬಗ್ಗೆ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಲತಂದೆ ದೇವರಾಜ್ ಹಾಗೂ ಮಕ್ಕಳ ತಾಯಿ ಫಾತಿಮಾಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
=ಉದಯವಾಣಿ
Comments are closed.