ಕರ್ನಾಟಕ

ಈ ಬಾರಿ ಸಚಿವ ಸ್ಥಾನ ಮಿಸ್ಸಾಗಿದೆಯೋ ಅವರಿಗೆಲ್ಲ 2018ರಲ್ಲಿ ಗ್ಯಾರಂಟಿ

Pinterest LinkedIn Tumblr

vidhanaಬೆಂಗಳೂರು: ಸಚಿವ ಸಂಪುಟ ಪುನಾರಚನೆಯಲ್ಲಿ ಮಂತ್ರಿಗಿರಿ ಸಿಗದ ಶಾಸಕರು ಸಿಟ್ಟಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಶಾಸಕರು ಹಾರಿಸುವ ಬಂಡಾಯದ ಬಾವುಟದಿಂದ ಸರ್ಕಾರಕ್ಕೆ ಸಮಸ್ಯೆಯಾಗಬಹುದು ಎಂದು ಅವರು ಕ್ರೋಧಾಗ್ನಿ ಶಮನಾಸ್ತ್ರವೊಂದನ್ನು ಪ್ರಯೋಗಿಸಿದ್ದಾರೆ.

ಅಜ್ಞಾತ ಸ್ಥಳಕ್ಕೆ ಹೋಗಿ ಕುಳಿತಿರುವ ಸಿದ್ದರಾಮಯ್ಯ, ಅಲ್ಲಿಂದಲೇ ವಾಟ್ಸಪ್‌ ಮೆಸೇಜೊಂದನ್ನು ಕಾಂಗ್ರೆಸ್‌ ಶಾಸಕರ ಗ್ರೂಪ್‌ನಲ್ಲಿ ಹರಿಬಿಟ್ಟಿದ್ದು, ಈ ಸಲ ಯಾರ್ಯಾರಿಗೆ ಸಚಿವ ಸ್ಥಾನ ಮಿಸ್ಸಾಗಿದೆಯೋ ಅವರಿಗೆಲ್ಲ 2018ರಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಗೆದ್ದು, ನಾನು ಮುಖ್ಯಮಂತ್ರಿಯಾದಾಗ ಖಂಡಿತ ಸಚಿವ ಸ್ಥಾನ ಕೊಡುತ್ತೇನೆ ಎಂದು ಭಾಷೆ ನೀಡಿದ್ದಾರೆ. ಇದಕ್ಕೆ ತರಹೇವಾರಿ ಕಮೆಂಟ್‌ಗಳು ಬಂದಿದ್ದು, ಅವುಗಳ ಬಗ್ಗೆ ಹೈಕಮಾಂಡ್‌ ವಿವರಣೆ ಕೇಳಿದೆ ಎಂದು ತಿಳಿದುಬಂದಿದೆ.
-ಉದಯವಾಣಿ

Comments are closed.