ಚನ್ನಪಟ್ಟಣ, ಜೂ.18- ಎರಡು ಹೆಣ್ಣು ಮಕ್ಕಳ ತಾಯಿ ಪತಿಯನ್ನು ತೊರೆದು 20ರ ಚಿಗುರು ಮೀಸೆ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೇವೂರು ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ. ಸ್ಫುರದ್ರೂಪಿಯಾಗಿರುವ ಆಂಟಿಗೆ 14 ಮತ್ತು 10 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು, ನನಗೆ ತಾಳಿ ಕಟ್ಟಿದ ಗಂಡನ ಜತೆ ಸಂಸಾರ ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದು ತನ್ನ ಎರಡು ಮಕ್ಕಳೊಂದಿಗೆ ಕೇವಲ 6 ತಿಂಗಳ ಹಿಂದೆ ಪರಿಚಿತನಾದ ಯುವಕನೊಂದಿಗೆ ಪರಾರಿಯಾಗಿದ್ದಾಳೆ.
ಬೆಂಗಳೂರಿನಲ್ಲಿ ಜಿಮ್ ಮಾಡಿಕೊಂಡು ಕಟ್ಟು ಮಸ್ತಾಗಿದ್ದ ಯುವಕ 6 ತಿಂಗಳಿಗೋ ವರ್ಷಕ್ಕೊಮ್ಮೆಯೋ ಊರಿಗೆ ಬರುತ್ತಿದ್ದ. ಆದರೆ ಕೆಲ ತಿಂಗಳ ಹಿಂದೆ ಆಂಟಿಯ ಪರಿಚಯವಾದ ನಂತರ ತಿಂಗಳಿಗೆ 8 ರಿಂದ 10 ಬಾರಿ ಬರುತ್ತಿದ್ದ ಎನ್ನಲಾಗಿದೆ. ಪದೇ ಪದೇ ಊರಿಗೆ ಬರುತ್ತಿದ್ದ ಯುವಕ ರಾತ್ರೋ ರಾತ್ರಿ ಆಂಟಿಯೊಂದಿಗೆ ಊರು ತೊರೆದಿದ್ದಾನೆ. ಬೆಳಗ್ಗೆ ನಾಪತ್ತೆಯಾಗಿರುವ ಪತ್ನಿಯ ಹುಡುಕಾಟ ನಡೆಸಿದ್ದಾಗ ಪತಿಯ ಕೈಗೆ ಒಂದು ಪತ್ರ ದೊರೆತಿದ್ದು , ಪತ್ರದಲ್ಲಿ ಆಕೆ ನನಗೆ ನಿಮ್ಮ ಜತೆ ಸಂಸಾರ ಮಾಡಲು ಆಗುತ್ತಿಲ್ಲ.
ನಾನು ನನ್ನ ಪ್ರಿಯಕರನೊಂದಿಗೆ ಹೋಗಿದ್ದೇನೆ. ನನ್ನನ್ನು ಹಾಗೂ ನನ್ನ ಮಕ್ಕಳನ್ನು ಹುಡುಕಿಸಲು ಪ್ರಯತ್ನಿಸಬೇಡಿ ಎಂದು ತನ್ನ ಪ್ರಿಯಕರನೊಂದಿಗೆ ಪತ್ರ ಬರೆಸಿ ಆಕೆ ಸಹಿ ಮಾಡಿ ಪರಾರಿಯಾಗಿದ್ದಾಳೆ. ಆಂಟಿ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಯುವಕ ಕೂಡ ತಮ್ಮ ಮನೆಯವರಿಗೆ ಪತ್ರ ಬರೆದಿದ್ದು , ನಾನು ನನ್ನನ್ನು ಮೆಚ್ಚಿದ ಆಂಟಿಯೊಂದಿಗೆ ನೆಮ್ಮದಿಯಾಗಿರುತ್ತೇನೆ. ನನ್ನ ಬಗ್ಗೆ ಚಿಂತೆ ಮಾಡಬೇಡಿ ಎಂದು ಪತ್ರ ಬರೆದು ಮನೆಯಲ್ಲಿಟ್ಟಿದ್ದ ಎನ್ನಲಾಗಿದೆ.
ದೂರದ ಊರಿನಲ್ಲಿ ಮನೆ ಮಾಡಿಕೊಂಡು ಸಂಸಾರ ಮಾಡುತ್ತಿದ್ದ ಆಂಟಿಯನ್ನು ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆ ತಂದು ಪತಿ-ಪತ್ನಿ ನಡುವೆ ರಾಜೀ ಸಂಧಾನ ಮಾಡಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪತಿರಾಯ ನಿನ್ನ ತಪ್ಪನ್ನೆಲ್ಲಾ ಮನ್ನಿಸುತ್ತೇನೆ. ಮಕ್ಕಳೊಂದಿಗೆ ಮನೆಗೆ ಬಂದು ಸಂಸಾರ ನಡೆಸು ಎಂದು ಒಪ್ಪಿಕೊಂಡರೂ, ನಾನು ಮಾತ್ರ ನನ್ನ ಪ್ರಿಯಕರನನ್ನು ಬಿಟ್ಟು ಬರುವುದಿಲ್ಲ ಎಂದು ಆಕೆ ಪಟ್ಟು ಹಿಡಿದಳು. ಹೀಗಾಗಿ ಪೊಲೀಸರು ಮತ್ತು ಗ್ರಾಮದ ಹಿರಿಯರು ಹಿರಿಯ ಮಗಳು ಅಪ್ಪನ ಜತೆ, ಕಿರಿಯ ಮಗಳು ತಾಯಿಯ ಜತೆ ಇರುವಂತೆ ಸೂಚಿಸಿ ಆಂಟಿಯನ್ನು ಆಕೆಯ ಪ್ರಿಯಕರನ ಜತೆ ಕಳುಹಿಸಿ ಕೊಡಬೇಕಾಯಿತು
Comments are closed.