ಕರ್ನಾಟಕ

ಖಾತೆ ಕಳೆದುಕೊಳ್ಳುತ್ತಿರುವ ಸಚಿವರು ಏನಂತಾರೆ?

Pinterest LinkedIn Tumblr

sid_soniaನವದೆಹಲಿ: ಸಂಪುಟ ಪುನರ್‍‍ರಚನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮತಿ ಸೂಚಿಸಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 13 ಹಾಲಿ ಸಚಿವರನ್ನು ಸಂಪುಟದಿಂದ ಕೈ ಬಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಚಿವ ಸಂಪುಟದಿಂದ ತಮ್ಮನ್ನು ಕೈ ಬಿಟ್ಟಿರುವುದಕ್ಕೆ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಖಾತೆ ಕಳೆದುಕೊಳ್ಳುತ್ತಿರುವ ಸಚಿವರು ಹೇಳಿದ್ದೇನು?
ನಾನೊಬ್ಬ ಕಾಂಗ್ರೆಸ್‍ನ ಸಕ್ರಿಯ ಕಾರ್ಯಕರ್ತ. ನನ್ನನ್ನು ತಾಳ್ಮೆಯಿಂದ ಇರಲು ಬಿಡಿ. ಸದ್ಯ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ
– ಅಭಯಚಂದ್ರ ಜೈನ್ (ಕ್ರೀಡಾ, ಮೀನುಗಾರಿಕೆ ಸಚಿವ)
ನಾನು ಸಚಿವನಾಗಿ ಇನ್ನೋವಾ ಕಾರಿನಲ್ಲಿ ಓಡಾಡ್ತಾ ಇದ್ದೀನಿ. ಸಚಿವ ಸ್ಥಾನದಿಂದ ಬಿಟ್ರೆ ಬೆಂಜ್ ಕಾರಿನಲ್ಲಿ ಓಡಾಡ್ತೀನಿ.
-ಶ್ಯಾಮನೂರು ಶಿವಶಂಕರಪ್ಪ (ತೋಟಗಾರಿಕೆ ಸಚಿವ)
ಸಚಿವ ಸ್ಥಾನ ಎಂಬುದು ಪಿತ್ರಾರ್ಜಿತ ಆಸ್ತಿಯಲ್ಲ. ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೆ. ಇನ್ಮುಂದೆ ಶಾಸಕನಾಗಿ ಕೆಲಸ ಮಾಡುತ್ತೇನೆ
-ಎಸ್ ಆರ್ ಪಾಟೀಲ್ (ಐಟಿಬಿಟಿ ಸಚಿವ)

Comments are closed.